ಗೋಲ್ಡ್ ಕೋಸ್ಟ್: 2018ನೇ ಸಾಲಿನ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಅಥ್ಲೀಟ್ ಗಳು ಉತ್ತಮ ಆರಂಭ ಮಾಡಿದ್ದು, ವೇಟ್ ಲಿಫ್ಟಿಂಗ್ ನಲ್ಲಿ 2 ಪದಕ ಬಂದ ಬೆನ್ನಲ್ಲೇ ಇತ್ತ ಬ್ಯಾಡ್ಮಿಂಟನ್ ವಿಭಾಗದಲ್ಲೂ ಭಾರತ ತಂಡ ಮುಂದಿನ ಸುತ್ತಿಗೆ ಪ್ರವೇಶ ಪಡೆದಿದೆ.
ಶ್ರೀಲಂಕಾ ವಿರುದ್ಧದ ಮಿಶ್ರ ಡಬಲ್ಸ್ ವಿಭಾಗದ ಪಂದ್ಯಗಳಲ್ಲಿ ಭಾರತ 5-0 ಅಂತರದ ಜಯ ಸಾಧಿಸಿದ್ದು, ದಿನದ ಆರಂಭದಲ್ಲೇ ಭಾರತದ ಪ್ರಣಾವ್ ಚೋಪ್ರಾ ಮತ್ತು ಋತ್ವಿಕಾ ಗಡ್ಡೆ ಜೋಡಿ ಲಂಕಾದ ಸಚಿನ್ ಡಯಾಸ್ ಮತ್ತು ತಿಲಿನಿ ಪ್ರಮೋದಿಕಾ ವಿರುದ್ಧ 21-15 19-21 22-20 ನೇರ ಸೆಟ್ ಗಳ ಜಯ ಗಳಿಸಿತು. ಇದರ ಬೆನ್ನಲ್ಲೇ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಕಿದಾಂಬಿ ಶ್ರೀಕಾಂತ್, ಲಂಕಾದ ನಿಲುಕಾ ಕರುಣಾರತನೆ ಅವರನ್ನು 21-16 21-10 ಅಂತರದಲ್ಲಿ ಮಣಿಸಿದರು. ಬಳಿಕ ನಡೆದ ಪುರುಷರ ಡಬಲ್ಸ್ ಪಂದ್ಯದಲ್ಲಿ ಸಾತ್ವಿಕ್ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಲಂಕಾದ ದಿನುಕಾ ಕರುಣಾರತ್ನಾ ಮತ್ತು ಬುವಾನೆಕಾ ಗುಯೊನ್ಥಿಲ್ಕೆಯಾ ವಿರುದ್ಧ 21-17 21-14 ಅಂತರದ ಜಯಗಳಿಸಿದರು.
ಬಳಿಕ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಭಾರತ ಸೈನಾ ನೆಹ್ವಾಲ್ ಶ್ರೀಲಂಕಾದ ಮಧುಶಿಕಾ ಬೆರುಲ್ಲೇಜ್ ಅವರ ವಿರುದ್ಧ 21-8 21-4 ನೇರ ಸೆಟ್ ಗಳ ಭರ್ಜರಿ ಜಯ ಸಾಧಿಸಿದರು. ಅಂತೆಯೇ ದಿನದ ಅಂತಿಮ ಪಂದ್ಯದಲ್ಲಿ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ಎನ್ ಸಿಕ್ಕಿ ರೆಡ್ಡಿ ಶ್ರೀಲಂಕಾದ ತಿಲಿನಿ ಪ್ರಮೋದಿಕಾ ಮತ್ತು ಕವಿದಿ ಸಿರಿಅನ್ನಗೆ ಅವರನ್ನು 21-12 21-14 ಅಂತರದಲ್ಲಿ ಮಣಿಸಿ ಬ್ಯಾಡ್ಮಿಂಟನ್ ನಲ್ಲಿ ಭಾರತ 5+-0 ಅಂತರದಲ್ಲಿ ಲಂಕಾ ವಿರುದ್ದ ಜಯ ಸಾಧಿಸುವಂತೆ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics