ಕ್ರೀಡೆ

ಕಾಮನ್'ವೆಲ್ತ್ ಕ್ರೀಡಾಕೂಟ 2018: ಬ್ಯಾಡ್ಮಿಂಟನ್ ಫೈನಲ್'ನಲ್ಲಿ ಸೈನಾ ನೆಹ್ವಾಲ್ ವಿರುದ್ಧ ಪಿವಿ. ಸಿಂಧು ಹಣಾಹಣಿ

Manjula VN
ಗೋಲ್ಡ್'ಕೋಸ್ಟ್: 21ನೇ ಕಾಮನ್'ವೆಲ್ತ್ ಕ್ರೀಡಾಕೂಡ ಬ್ಯಾಡ್ಮಿಂಟನ್'ನಲ್ಲಿ ಭಾರತದ ಸೈನಾ ನೆಹ್ವಾಲ್ ಹಾಗೂ ಪಿ.ವಿ.ಸಿಂಧು ಅವರು ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ ನಲ್ಲಿ ಫೈನಲ್'ಗೆ ಲಗ್ಗೆ ಇಟ್ಟಿದ್ದಾರೆ. 
ಭಾರತದ ಅಗ್ರ ಷಟ್ಲರ್ ಗಳಾದ ಪಿ.ವಿ.ಸಿಂಧು ಮತ್ತು ಸೈನಾ ನೆಹ್ವಾಲ್ ಅವರು ಅಂತಿಮ ಕದನಕ್ಕೆ ಪ್ರವೇಶ ಮಾಡಿದ್ದು, ಕ್ಯಾರಾರಾ ಸ್ಫೋರ್ಟ್ಸ್ ಅರೇನಾದಲ್ಲಿ ನಡೆದ ಶನಿವರಾದ ಹೆಚ್ಚಿನ ಪಂದ್ಯಗಳಲ್ಲಿ ಭಾರತದ ಆಟಗಾರರು ಗೆಲವು ಸಾಧಿಸಿದರು. 
ಒಲಿಂಪಿಕ್ ಹಾಗೂ ವಿಶ್ವ ಚಾಂಪಿಯನ್'ಶಿಪ್ ಬೆಳ್ಳಿ ಪದಕ ವಿಜೇತೆ ಸಿಂಧು ಅವರು,  21-18, 21-8 ರಿಂದ ಕೆನಡಾದ ಮಿಚೆಲಿ ಲಿ ಅವರನ್ನು ಸೋಲಿಸಿದರು. 
2010ರ ಕಾಮನ್'ವೆಲ್ತ್ ಕ್ರೀಡಾಕೂಟದ ಚಾಂಪಿಯನ್ ಸೈನಾ ನೆಹ್ವಾಹ್ ಅವರು, ಸ್ಕಾಟ್ಲಂಡ್ನ ಕ್ರಿಸ್ಟಿ ಗಿಲ್ಮೋರ್ ಅವರನ್ನು 21-14, 18-21, 21-17 ರಿಂದ ಮಣಿಸಿದ್ದಾರೆ. ಇದರಂತೆ ಗೋಲ್ಡ್ ಕೋಸ್ಟ್ ಕಾಮನ್'ವೆಲ್ತ್ ಕ್ರೀಡಾಕೂಡದಲ್ಲಿ ಭಾರತದ ಷಟ್ಲರ್ ಗಳ ಭರ್ಜರಿ ನಿರ್ವಹಣೆ ಮುಂದುವರೆದಿದ್ದು, ಅಂತಿಮ ಹಣಾಹಣಿ ಭಾನುವಾರ ನಡೆಯಲಿದೆ. 
SCROLL FOR NEXT