ಸಂಗ್ರಹ ಚಿತ್ರ 
ಕ್ರೀಡೆ

35 ವರ್ಷ, ಮೂರು ಮಕ್ಕಳು; ಕಾಮನ್ ವೆಲ್ತ್ ಚಿನ್ನ ಗೆದ್ದ ಮೇರಿಕೋಮ್ ಸಕ್ಸಸ್ ಸೀಕ್ರೇಟ್ ಏನು ಗೊತ್ತಾ?

ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯ ರೆಸ್ಲಿಂಗ್ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ಭಾರತದ ಮೇರಿ ಕೋಮ್ ಇದೀಗ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಗೋಲ್ಡ್ ಕೋಸ್ಟ್: ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯ ಬಾಕ್ಸಿಂಗ್ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ಭಾರತದ ಮೇರಿ ಕೋಮ್ ಇದೀಗ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಈ ಹಿಂದೆ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದ ಮೇರಿಕೋಮ್ ಭಾರತದ ಮಹಿಳೆಯ ಬಾಕ್ಸಿಂಗ್ ಕ್ಷೇತ್ರದ ಐಕಾನ್ ಆಗಿ ಗುರುತಿಸಿಕೊಂಡಿದ್ದರು. 35 ವರ್ಷದ ಮೇರಿಕೋಮ್ ಗೆ ಮೂರು ಜನ ಮಕ್ಕಳಿದ್ದಾರೆ. ಈಗಾಗಲೇ ಮೇರಿಕೋಮ್ ಐದು ವಿಶ್ವ ಮಟ್ಟದ ಚಾಂಪಿಯನ್ ಕೂಟಗಳ ವಿಜೇತರಾಗಿದ್ದು, ಒಲಿಂಪಿಕ್ಸ್ ಕ್ರೀಡಾಕೂಟ ಆರಂಭವಾಗುವ ತಿಂಗಳ ಮೊದಲಷ್ಚೇ ಅವರು ಏಷ್ಯನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಇಷ್ಟಕ್ಕೂ ಮೇರಿಕೋಮ್ ಅವರ ಈ ಸಕ್ಸಸ್ ಸೀಕ್ರೇಟ್ ಏನು?
ಈ ವಿಚಾರವನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಚ್ ನಲ್ಲಿ ನಡೆದ 48 ಕೆಜಿ ವಿಭಾಗದ ಮಹಿಳೆಯರ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮೇರಿಕೋಮ್ ತಮ್ಮ ಸಕ್ಸಸ್ ಸೀಕ್ರೇಟ್ ಕುರಿತು ಮಾತನಾಡಿದ್ದು, ನನ್ನ ಯಶಸ್ಸಿನ ಗುಟ್ಟು ನನ್ನ ಫಿಟ್ ನೆಸ್ ಎಂದು ಹೇಳಿದ್ದಾರೆ.
"ನನ್ನ ಫಿಟ್ ನೆಸ್ ನಿಂದಾಗಿಯೇ ಅಂಗಣದಲ್ಲಿ ನಾನು ತುಂಬಾ ಚುರುಕಾಗಿರುತ್ತೇನೆ. ಅಂಗಣಕ್ಕೆ ಇಳಿಯುವ ಮುನ್ನ ನಾನು ಸಾಕಷ್ಟು ಸಿದ್ಧತೆ ನಡೆಸಿಕೊಳ್ಳುತ್ತೇನೆ. ನನ್ನ ಎದುರಾಳಿಗಳನ್ನು ನಾನು ಕೆಲವೇ ಸೆಕೆಂಡ್ ಗಳಲ್ಲಿ ಹಿಡಿಯಬಲ್ಲೆ ಇದು ನನ್ನ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಎದುರಾಳಿಯ ತಂತ್ರಗಾರಿಕೆಯನ್ನು ತುಂಬಾ ಬೇಗ ಅರಿಯಬಲ್ಲೆ. ನಾನು ಫಿಟ್ ನೆಸ್ ಗೆ ಸಾಕಷ್ಟು ಒತ್ತು ನೀಡುತ್ತೇನೆ. ಹೀಗಾಗಿ ನಾನು ಬೇಗ ಗಾಯಗೊಳ್ಳುವುದಿಲ್ಲ. ನನಗೂ ಕೂಡ ಕಡಿಮೆ ಪ್ರಮಾಣದ ಸಮಸ್ಯೆಗಳಿವೆಯಾದರೂ, ಅದಕ್ಕಿಂತಲೂ ನನ್ನ ಗುರಿ ದೊಡ್ಡದಾಗಿರುತ್ತದೆ. ಹೀಗಾಗಿ ಅದರ ಮೇಲೆ ನಾನು ನನ್ನ ಗಮನ ಕೇಂದ್ರೀಕರಿಸಿ ಆಟವಾಡುತ್ತೇನೆ ಎಂದು ಮೇರಿಕೋಮ್ ಹೇಳಿದ್ದಾರೆ.ಟ
ಒಂದು ವೇಳೆ ನಾನು ನನ್ನ ತಲೆ ಮತ್ತು ಹೃದಯದಲ್ಲಿ ಏನನ್ನಾದರೂ ನಿರ್ಧರಿಸಿದೆ ಎಂದರೆ ಆಗ ನನ್ನನ್ನು ನನ್ನ ಗಂಡ ಕೂಡ ತಡೆಯಲೂ ಸಾಧ್ಯವಿಲ್ಲ. ಅವರೂ ಕೂಡ ನನ್ನ ಗುರಿ ಸಾಧನೆಗೆ ಅಡ್ಟಿಯಾಗುವುದಿಲ್ಲ. ಬದಲಿಗೆ ಬೆನ್ನಿಗೆ ನಿಂತು ಸಹಕರಿಸುತ್ತಾರೆ. ಯಾವಾಗಲೂ ನಾನು ತಾಳ್ಮೆಯಿಂದಿರಲು ಪ್ರಯತ್ನಿಸುತ್ತೇನೆ. ನಿಜಕ್ಕೂ ನನ್ನ ತಾಳ್ಮೆಯೇ ನನ್ನ ದೊಡ್ಡ ಶಕ್ತಿಯಾಗಿದೆ. ಇದೇ ಕಾರಣಕ್ಕೆ ಅಭ್ಯಾಸದ ವೇಳೆ ನಾನು ಹೆಚ್ಚು ಸುಸ್ತಾಗುವುದಿಲ್ಲ ಎಂದು ಹೇಳಿದ್ದಾರೆ. 
ಇನ್ನು 2020ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಕುರಿತು ಮಾತನಾಡಿದ ಮೇರಿಕೋಮ್, ಆ ಬಗ್ಗೆ ಈಗಲೇ ಉತ್ತರಿಸುವುದು ಕಷ್ಟವಾಗುತ್ತದೆ. 2020ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದು ಕಷ್ಟ ಸಾಧ್ಯ. ಆದರೂ ನನ್ನ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. 48 ಕೆಜಿ ವಿಭಾಗ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇರುವುದಿಲ್ಲ. ಹೀಗಾಗಿ ನಾನು ನನ್ನ ತೂಕವನ್ನು 51 ಕೆಜಿಗೆ ಹೆಚ್ಚಿಸಿಕೊಳ್ಳಬೇಕಿದೆ. ಇದು ಅಷ್ಟು ಸುಲಭಸಾಧ್ಯವಲ್ಲ. 2020ರವರೆಗೂ ನಾನು ಸೂಪಪ್ ಫಿಟ್ ಆಗಿದ್ದರೆ ಖಂಡಿತಾ ಸ್ಪರ್ಧಿಸುತ್ತೇನೆ ಎಂದು ಮೇರಿಕೋಮೇ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test Day 3: ಫಾಲೋ ಆನ್ ಭೀತಿಯಲ್ಲಿ ಲಂಕಾಪಡೆ, ಮಳೆಯಿಂದಾಗಿ 3ನೇ ದಿನದಾಟ ಮೊಟಕು!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!