ಸಂಗ್ರಹ ಚಿತ್ರ 
ಕ್ರೀಡೆ

ಬಿಎಂಡಬ್ಲ್ಯೂಎಫ್ ವಿಶ್ವ ಬ್ಯಾಡ್ಮಿಂಟನ್‍: ಭಾರತದ ಸೈನಾ ನೆಹ್ವಾಲ್, ರಾಂಕಿರೆಡ್ಡಿಗೆ ಸೋಲು!

ನಾಂಜಿಂಗ್ ನಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಶಿಪ್‍ ಟೂರ್ನಿಯಲ್ಲಿ ಭಾರತದ ಶಟ್ಲರ್ ಸೈನಾ ನೆಹ್ವಾಲ್ ಹಾಗೂ ರಾಂಕಿರೆಡ್ಡಿಗೆ ಸೋಲು ಕಂಡಿದ್ದಾರೆ.

ನವದೆಹಲಿ: ನಾಂಜಿಂಗ್ ನಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಶಿಪ್‍ ಟೂರ್ನಿಯಲ್ಲಿ ಭಾರತದ ಶಟ್ಲರ್ ಸೈನಾ ನೆಹ್ವಾಲ್ ಹಾಗೂ ರಾಂಕಿರೆಡ್ಡಿಗೆ ಸೋಲು ಕಂಡಿದ್ದಾರೆ.
ಇಂದು ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಪೈನಲ್ ಪಂದ್ಯದಲ್ಲಿ ಭಾರತದ ಸೈನಾ ನೆಹ್ವಾಲ್ ಅವರು ಸ್ಪೇನ್ ಆಟಗಾರ್ತಿ ಕರೋಲಿನಾ ಮರಿನ್ ವಿರುದ್ಧ 21-6, 21-11 ಅಂತರದ ನೇರ ಸೆಟ್ ಗಳಿಂದ ಪರಾಭವಗೊಂಡರು. ಪಂದ್ಯದ ಆರಂಭದಿಂದಲೂ ಉತ್ತಮ ಪ್ರದರ್ಶನ ನಿಡಿದ ಮರಿನ್ ಆರಂಭದಲ್ಲಿ 11-2 ಅಂತರ ಕಾಯ್ದುಕೊಳ್ಳುವ ಮೂಲಕ ಸೈನಾ ವಿರುದ್ಧ ಪ್ರಬಲ ಹಿಡಿತ ಸಾಧಿಸಿದರು. ಈ ಮೂಲಕ 21-6 ಅಂತರದಿಂದ ಮೊದಲ ಸೆಟ್ ಸೈನಾ ಕೈ ತಪ್ಪಿತು. 
ಮೊದಲ ಸೆಟ್ ನ ಹಿನ್ನಡೆ ಒತ್ತಡದ ನಡುವೆಯೇ ಎರಡನೇ ಸೆಟ್ ನಲ್ಲಿ ಎಚ್ಚರಿಕೆಯ ಆಟವಾಡಿದ ಸೈನಾ ಎದುರಾಳಿ ಮರಿನ್ ಗೆ ಉತ್ತಮ ತಿರುಗೇಟು ನಿಡಿದರು. ಆದರೆ ಆಕ್ರಮಣಕಾರಿ ಆಟವಾಡಿದ ಮರಿನ್ 21-11 ಅಂತರದಿಂದ ಎರಡನೇ ಸೆಟ್ ಅ‍ನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಮತ್ತೊಂದು ಪಂದ್ಯದಲ್ಲಿ ಭಾರತದ  ಆಟಗಾರರಾದ ರಾಂಕಿರೆಡ್ಡಿ, ಪೊನ್ನಪ್ಪಗೆ ಸೋಲು
ಇನ್ನು ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಅಶ್ವಿನಿ ಪೊನ್ನಪ್ಪ ಜೊಡಿಯು ಅಗ್ರ ಶ್ರೇಯಾಂಕಿತ ಚೀನಾದ ಜೋಡಿ ಜೆಮಗ್ಸಿವಿ ಮತ್ತು ಹುವಾಂಗ್ಯಾಂಗಿಯಾಂಗ್‍ ವಿರುದ್ಧ 17-21,10-21 ಅಂತರದ ಸೋಲು ಕಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಶನ್: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪೆನ್ ಡ್ರೈವ್ ಸಲ್ಲಿಕೆ; ನ್ಯಾಯಾಂಗ ತನಿಖೆಗೆ ಆಗ್ರಹ!

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!

ಬೆಂಗಳೂರಿನಲ್ಲಿ SIR ಪ್ರತಿಭಟನೆ ವೇಳೆ ಪೊಲೀಸ್ ಕ್ರಮ: ಮರು ಪರಿಶೀಲನೆಗೆ ಪ್ರಿಯಾಂಕ್ ಖರ್ಗೆ ಆದೇಶ!

ಪುಣೆ ಟೆಕ್ಕಿ ಆತ್ಮಹತ್ಯೆ: ಡೆತ್‌ನೋಟ್‌ ಪತ್ತೆ; ಸಂಬಳ, ತವರು ಮನೆಯ ಫ್ಲಾಟ್ ವರ್ಗಾಯಿಸುವಂತೆ ಅತ್ತೆ-ಮಾವ ಒತ್ತಡ!