ಕ್ರೀಡೆ

ಏಷ್ಯನ್ ಗೇಮ್ಸ್ 2018: ಕಬಡ್ಡಿ ಸೆಮಿಫೈನಲ್ಸ್ ನಲ್ಲಿ ಭಾರತವನ್ನು ಸೋಲಿಸಿ ಇತಿಹಾಸ ನಿರ್ಮಿಸಿದ ಇರಾನ್!

Srinivas Rao BV
ಜಕಾರ್ತ: ಏಷ್ಯನ್ ಗೇಮ್ಸ್ ನ 18 ನೇ ಆವೃತ್ತಿಯ 5 ನೇ ದಿನದಂದು ಭಾರತ ಗೆದ್ದಿರುವ ಪದಕಗಳ ಸಂಖ್ಯೆ 18 ಕ್ಕೆ ಏರಿಕೆಯಾಗಿದ್ದು ಅತಿ ಹೆಚ್ಚು ಪದಕ ಗೆದ್ದ ರಾಷ್ಟ್ರಗಳ ಪೈಕಿ 10 ನೇ ಸ್ಥಾನದಲ್ಲಿದೆ. 
5 ನೇ ದಿನದಂದು ಕಬಡ್ಡಿ ಕ್ರೀಡೆಯಲ್ಲಿ ಭಾರತ ತಂಡ ಮುಗ್ಗರಿಸಿದ್ದು, ಇರಾನ್ ವಿರುದ್ಧ ಸೋಲು ಕಂಡಿದೆ. 27-18 ಅಂತರದಿಂದ ಇರಾನ್ ಏಷ್ಯನ್ ಗೇಮ್ಸ್ ನಲ್ಲಿ 7 ಬಾರಿ ಚಿನ್ನದ ಪದಕ ಗೆದ್ದಿದ್ದ ತಂಡವನ್ನು ಸೆಮಿಫೈನಲ್ಸ್ ನಲ್ಲಿ ಮಣಿಸಿದ್ದು, ಭಾರತದ ಮತ್ತೊಂದು ಚಿನ್ನದ ಪದಕದ ಕನಸನ್ನು ಭಗ್ನಗೊಳಿಸಿದೆ. 
ಭಾರತ 1990 ರಲ್ಲಿ ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಲು ಪ್ರಾರಂಭಿಸಿದಾಗಿನಿಂದಲೂ ಕಬಡ್ಡಿ ಕ್ರೀಡೆಯಲ್ಲಿ ಪ್ರಾಬಲ್ಯ ಮೆರೆದಿತ್ತು. ಆದರೆ ಈಗ ಇರಾನ್ ವಿರುದ್ಧ ಸೋತಿದ್ದು, ಕಂಚಿನ ಪದಕವನ್ನು ಪಾಕಿಸ್ತಾನದ ಜೊತೆಗೆ ಹಂಚಿಕೊಳ್ಳಬೇಕಾಗಿದೆ. ಪಾಕಿಸ್ತಾನ 24-27 ಅಂತರದಿಂದ ಕೊರಿಯಾ ವಿರುದ್ಧ ಸೋತಿತ್ತು. 
SCROLL FOR NEXT