ಜಕಾರ್ತಾ: ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2018ರ ಕ್ರೀಡಾಕೂಟದಲ್ಲಿ ಮಹಿಳೆಯರ 4x400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಭಾರತ ಸತತ ಐದನೇ ಬಾರಿ ಚಿನ್ನ ಗೆದ್ದುಕೊಂಡಿದೆ.
ಹಿಮಾ ದಾಸ್, ಎಂ.ಆರ್ ಪೂವಮ್ಮ, ಎಸ್ ಗಾಯಕ್ವಾಡ್ ಮತ್ತು ಮಿಸ್ಮಯ ಕೊರೊತ್ ಅವರನ್ನೊಳಗೊಂಡ ಭಾರತದ ತಂಡ, 3:28.72 ನಿಮಿಷಗಳಲ್ಲಿ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಗುರಿ ತಲುಪುವ ಮೂಲಕ ಚಿನ್ನಕ್ಕೆ ಮುತ್ತಿಕ್ಕಿದ್ದರು. ಇದರೊಂದಿಗೆ ಭಾರತದ ಚಿನ್ನದ ಪದಕಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಮಹಿಳೆಯರ ತಂಡ, 4x400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಸತತವಾಗಿ ಐದನೇ ಬಾರಿಗೆ ಚಿನ್ನದ ಪದಕವನ್ನು ಬಾಚಿಕೊಂಡಿದೆ.
4x400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಬಹ್ರೇನ್ ಬೆಳ್ಳಿ ಪದಕ ಹಾಗೂ ವಿಯೆಟ್ನಾಂ ಕಂಚಿನ ಪದಕಕ್ಕೆ ತೃಪ್ತಿಪಟ್ಟಿವೆ.