ಕ್ರೀಡೆ

ಭಾರತ ತಂಡದ ಮಾಜಿ ನಾಯಕ ಅನೂಪ್ ಕುಮಾರ್ ಕಬಡ್ಡಿಗೆ ವಿದಾಯ!

Shilpa D
ನವದೆಹಲಿ: ಭಾರತ ತಂಡದ ಮಾಜಿ ನಾಯಕ 35 ವರ್ಷದ ಅನೂಪ್‌ ಕುಮಾರ್ ಕಬಡ್ಡಿಗೆ ಬುಧವಾರ ವಿದಾಯ ಹೇಳಿದ್ದಾರೆ.
ಪ್ರಸಕ್ತ ಪ್ರೋ ಕಬಡ್ಡಿ ಲೀಗ್‌ನಲ್ಲಿ ಜೈಪುರ್‌ ಪಿಂಕ್‌ ಪ್ಯಾಂಥರ್ಸ್‌ ಪರ ಆಡುತ್ತಿದ್ದ ಕಬಡ್ಡಿ ದಂತಕಥೆ ಅನೂಪ್‌ ತಮ್ಮ 15 ವರ್ಷಗಳ ಸುದೀರ್ಘಾವಧಿಯ ವೃತ್ತಿ ಬದುಕಿಗೆ ಗುಡ್‌ಬೈ ಹೇಳಿದ್ದಾರೆ. 
2006ರ ಸೌತ್‌ ಏಷ್ಯನ್‌ ಗೇಮ್ಸ್‌ನಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಅನೂಪ್‌, ಅರ್ಜುನ ಪ್ರಶಸ್ತಿಗೂ ಭಾಜನರಾಗಿದ್ದಾರೆ. 
2010 ಮತ್ತು 2014ರ ಏಷ್ಯನ್‌ ಗೇಮ್ಸ್‌ನಲ್ಲಿ ತಮ್ಮ ನಾಯಕತ್ವದ ಮೂಲಕ 2 ಚಿನ್ನ ಗೆದ್ದುಕೊಟ್ಟಿರುವ ಅವರು, 2016ರಲ್ಲಿ ವಿಶ್ವಕಪ್‌ ಗೆದ್ದ ಭಾರತ ತಂಡವನ್ನು ಮುನ್ನಡೆಸಿದ್ದರು.
ಮೊದಲ ಆವೃತ್ತಿಯಿಂದಲೂ ಯು ಮುಂಬಾ ಪರ ಪ್ರೊ ಕಬಡ್ಡಿಯಲ್ಲಿ ಆಡುತ್ತಿದ್ದ ಅನೂಪ್, 2ನೇ ಆವೃತ್ತಿಯಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. 
SCROLL FOR NEXT