ಭಾರತ-ಕೊರಿಯಾ ಹಾಕಿ ಸರಣಿ: ಮೊದಲ ಪಂದ್ಯದಲ್ಲಿ ಭಾರತ ವನಿತೆಯರಿಗೆ ಜಯ 
ಕ್ರೀಡೆ

ಭಾರತ-ಕೊರಿಯಾ ಹಾಕಿ ಸರಣಿ: ಮೊದಲ ಪಂದ್ಯದಲ್ಲಿ ಭಾರತ ವನಿತೆಯರಿಗೆ ಜಯ

ಸಿಯೋಲ್ ನ ಜಿನ್‌ಚುನ್‌ ರಾಷ್ಟ್ರೀಯ ಅಥ್ಲೆಟಿಕ್ಸ್‌ ಸೆಂಟರ್‌ನಲ್ಲಿ ನಡೆಯುತ್ತಿರುವ ಭಾರತ-ಕೊರಿಯಾ ಮಹಿಳಾ ಹಾಕಿ ಸರಣಿಯ ಮೊದಲ ಪಂದ್ಯದಲ್ಲಿ...........

ಸಿಯೋಲ್(ದಕ್ಷಿಣ ಕೊರಿಯಾ) : ಸಿಯೋಲ್ ನ ಜಿನ್‌ಚುನ್‌ ರಾಷ್ಟ್ರೀಯ ಅಥ್ಲೆಟಿಕ್ಸ್‌ ಸೆಂಟರ್‌ನಲ್ಲಿ ನಡೆಯುತ್ತಿರುವ ಭಾರತ-ಕೊರಿಯಾ ಮಹಿಳಾ ಹಾಕಿ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಅತಿಥೆಯರ ವಿರುದ್ಧ 1-0 ಅಂತರದ ಗೆಲುವು ಸಾಧಿಸಿದೆ.
ಒಟ್ಟಾರೆ ಐದು ಪಂದ್ಯಗಳ ಈ ಸರಣಿಯಲ್ಲಿ ಭಾರತ ತಂಡ ಪ್ರಾರಂಭಿಕ ಗೆಲುವಿನೊಡನೆ ಮುನ್ನಡೆ ಸಾಧಿಸಿಕೊಂಡಿದೆ. 
ಪ್ರಾರಂಭದಿಂದಲೂ ಉತ್ತಮ ಆಟ ಪ್ರದರ್ಶಿಸಿದ ಬಾರತ ಮಹಿಳಾ ತಂಡ ಪಂದ್ಯದ ಐದನೇ ನಿಮಿಷದಲ್ಲಿ ಪ್ರಥಮ ಗೋಲು ಗಳಿಸುವಲ್ಲಿ ಯಶಸ್ವಿಯಾಗಿತ್ತು. ಭಾರತದ ಪರವಾಗಿ ಲಾಲ್ಮೆಮಿಯಾಮಿ  ಅವರು ಗೋಲು ಗಳಿಸಿಕೊಟ್ಟು ತಂಡದ ಮುನ್ನಡೆಗೆ ಕಾರಣರಾದರು.
ಇದಾದ ಬಳಿಕ ಬಾರತಕ್ಕೆ ಒದಗಬಹುದಾಗಿದ್ದ ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಕೊರಿಯನ್ನರ ಪ್ರಬಲ ದಾಳಿ ಇಲ್ಲವಾಗಿಸಿತ್ತು. ಪಂದ್ಯದ 23ನೇ ನಿಮಿಷದಲ್ಲಿ ಕೊರಿಯನ್ನರಿಗೆ ಒದಗಿದ್ದ ಪೆನಾಲ್ಟಿ ಕಾರ್ನರ್ ನ ಗೋಲು ಗಳಿಕೆ ಅವಕಾಶವನ್ನು ಭಾರತದ ಗೋಲ್ ಕೀಪರ್ ಸ್ವಾತಿ ಬಲವಾಗಿ ಪ್ರತಿರೋಧ ಒಡ್ಡುವ ಮುಖೇನ ತಡೆದರು.
ಪಂದ್ಯದ ಅಂತಿಮ ಕ್ಷಣಗಳಲ್ಲಿ ಸಹ ಬಾರತ ಮಹಿಳಾ ತಂಡವು ರಕ್ಷಣಾತ್ಮ ಆಟ ಪ್ರದರ್ಶಿಸಿ ಗೆಲುವು ಪಡೆಯುವ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿತು. ಅತಿಥೇಯರಿಗೆ ಸಿಗಬಹುದಾಗಿದ್ದ ಅವಕಶವನ್ನು ಗೋಲ್ ಕೀಪರ್ ಸ್ವಾತಿ ಪ್ರಬಲವಾಗಿ ತಡೆದದ್ದು ಅಂತಿಮವಾಗಿ ಭಾರತ 1-0 ಅಂತರದ ಗೆಲುವು ಸಾಧಿಸಿದೆ.
ಮಂಗಳವಾರ ಭಾರತ ತಮ್ಮ ಎರಡನೇ ಪಂದ್ಯವನ್ನು ಆಡಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಖಾಸಗಿ ಶಾಲೆಗಳ ಮಾನ್ಯತೆ: ನಿಯಮಗಳ ಪರಿಷ್ಕರಣೆಗೆ ಸದನ ಸಮಿತಿ ರಚನೆ- ಸಚಿವ ಮಧು ಬಂಗಾರಪ್ಪ

ಕೊಲೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಜಾ!

ದೇಶಕ್ಕೆ ಸ್ವಾತಂತ್ರ್ಯ ಬಂದ 79 ವರ್ಷಗಳ ನಂತರ 'ವಂದೇ ಮಾತರಂ' ಚರ್ಚೆಯ ಅಗತ್ಯವೇನಿತ್ತು?: ಪ್ರಿಯಾಂಕಾ ಗಾಂಧಿ; Video

ಪೂಮಾದಿಂದ 300 ಕೋಟಿ ಆಫರ್ ಕೈಬಿಟ್ಟ ಕೊಹ್ಲಿ: ತನ್ನದೇ ಬ್ರ್ಯಾಂಡ್ ಗಾಗಿ ಹೊಸ ಡೀಲ್, 40 ಕೋಟಿ ರೂ. ಹೂಡಿಕೆ!

ಮಳೆ, ಚಳಿಯಿಂದಾಗಿ ಕರ್ನಾಟಕದಲ್ಲಿ ಬಿಯರ್ ಮಾರಾಟದಲ್ಲಿ ಶೇ. 19.55ರಷ್ಟು ಕುಸಿತ: ಸಚಿವ ತಿಮ್ಮಾಪುರ

SCROLL FOR NEXT