ಸಂಗ್ರಹ ಚಿತ್ರ 
ಕ್ರೀಡೆ

ಹಾಕಿ: ಮತ್ತೆ ಪಾಕಿಸ್ತಾನ ಬಗ್ಗು ಬಡಿದ ಭಾರತ, ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ 2ನೇ ಜಯ

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನಕ್ಕೆ ಭಾರತ ತಂಡ ಮತ್ತೆ ಸೋಲಿನ ರುಚಿ ತೋರಿಸಿದ್ದು, ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ತನ್ನ 2ನೇ ಪಂದ್ಯದಲ್ಲಿ ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ.

ನವದೆಹಲಿ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನಕ್ಕೆ ಭಾರತ ತಂಡ ಮತ್ತೆ ಸೋಲಿನ ರುಚಿ ತೋರಿಸಿದ್ದು, ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ತನ್ನ 2ನೇ ಪಂದ್ಯದಲ್ಲಿ ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ.
ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಇಂದು ನಡೆದ ತನ್ನ 2ನೇ ಪಂದ್ಯದಲ್ಲಿ ಭಾರತ ತಂಡ ತನ್ನ ಸಾಂಪ್ರದಾಯಿತ ಎದುರಾಳಿ ಪಾಕಿಸ್ತಾನದ ವಿರುದ್ಧ 3-1 ಅಂತರದ ಗೋಲುಗಳ ಭರ್ಜರಿ ಜಯ ದಾಖಲಿಸಿತು. ಪಂದ್ಯ ಆರಂಭವಾದ ಮೊದಲ ನಿಮಿಷದಲ್ಲೇ ಪಾಕಿಸ್ತಾನದ ಪರ ಇರ್ಫಾನ್ ಜೂನಿಯರ್ ಗೋಲು ಗಳಿಸಿ ಭಾರತಕ್ಕೆ ಆರಂಭಿಕ ಆಘಾತ ನೀಡಿದರು. ಆದರೆ ಪಂದ್ಯದ 24 ನಿಮಿಷದಲ್ಲಿ ಪಾಕಿಸ್ತಾನಕ್ಕೆ ಮನ್ ಪ್ರೀತ್ ಗೋಲು ತಿರುಗೇಟು ನೀಡಿದರು. 
ಆ ಬಳಿಕ 33ನೇ ನಿಮಿಷದಲ್ಲಿ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಮನ್ ದೀಪ್ ಗೋಲ್ ಭಾರಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಬಳಿಕ 42 ನೇ ನಿಮಿಷದಲ್ಲಿ ಮ್ಯಾಜಿಕ್ ಮಾಡಿದ ದಿಲ್ ಪ್ರೀತ್ ಸಿಂಗ್ ತಮ್ಮದಲ್ಲದ ಅವಕಾಶವನ್ನು ತಮ್ಮ ಚಾಕಚಕ್ಯತೆಯ ಪ್ರದರ್ಶನ ಮಾಡಿ ಗೋಲಾಗಿ ಪರಿವರ್ತಿಸಿದರು. ಆ ಮೂಲಕ ಭಾರತ 3-1 ಅಂತರದ ಭಾರಿ ಮುನ್ನಡೆ ಪಡೆಯಿತು. ಪಂದ್ಯದ ಅವಧಿ ಮುಕ್ತಾಯದ ವೇಳೆಗೆ ಭಾರತ 2 ಗೋಲುಗಳ ಮುನ್ನಡೆಯ ಮೂಲಕ ಭರ್ಜರಿ ಜಯ ಸಾಧಿಸಿತು.
ಇದಕ್ಕೂ ಮೊದಲು ತನ್ನ ಮೊದಲ ಪಂದ್ಯದಲ್ಲಿ ಓಮನ್ ಎದುರಿಸಿದ್ದ ಭಾರತ 11-0 ಅಂತರದ ಭರ್ಜರಿ ಜಯ ಸಾಧಿಸಿ ಶುಭಾರಂಭ ಮಾಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ