ವಾಷಿಂಗ್ಟನ್: ಡಬ್ಲ್ಯುಡಬ್ಲ್ಯುಇ ಚಾಂಪಿಯನ್ ಸ್ಟಾರ್ ರೋಮನ್ ರೈನ್ಸ್ ತಮಗೆ ಲ್ಯುಕೇಮಿಯಾ (ರಕ್ತದ ಕ್ಯಾನ್ಸರ್) ಇರುವ ಕಾರಣ ತನ್ನ ವಿಶ್ವ ಚಾಂಪಿಯನ್ ಪಟ್ಟವನ್ನು ಹಿಂದಿರುಗಿಸುತ್ತಿದ್ದೇನೆ ಎಂದು ಘೊಷಿಸಿದ್ದಾರೆ.
ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ರೈನ್ಸ್ ಸೋಮವಾರ ತಮ್ಮ ಅಭಿಮಾನಿಗಳಿಗೆ ಈ ವಿಷಯವನ್ನು ಖಚಿತಪಡಿಸಿದ್ದಾರೆ."ನಾನು ಲ್ಯುಕೇಮಿಯಾದಿಂದ ಬಳಲುತ್ತಿದ್ದೇನೆ. ಕಳೆದ 11 ವರ್ಷಗಳಿಂದ ನನಗೆ ಈ ರೋಗ ಬಾಂಧಿಸುತ್ತಿದೆ. ಹೀಗಾಗಿ ಡಬ್ಲ್ಯುಡಬ್ಲ್ಯುಇ ನಿಂದ ಹೊರಗುಳಿಯುವುದು ಅನಿವಾರ್ಯವಾಗಿದೆ" ಅವರು ಹೇಳಿದ್ದಾರೆ.
ಮೂವತ್ತಮೂರು ವರ್ಷದ ರೈನ್ಸ್ ಗೆ ಲ್ಯುಕೇಮಿಯಾ ಮಾರಕ ರೋಗ ಮತ್ತೆ ಮರುಕಳಿಸಿದೆ. ಇದೇ ಕಾರಣಕ್ಕೆ ಅವರು ವಿಶ್ವ ಚಾಂಪಿಯನ್ ಪಟ್ಟ ತ್ಯಜಿಸುತ್ತಿದ್ದು ಅವರ ಭಿಮಾನಿಗಳು ಅವರಿಗೆ ಸಾಮಾಜಿಕ ತಾಣದ ಮೂಲಕ ಬೆಂಬಲ ಸೂಚಿಸುತ್ತಿದ್ದಾರೆ. ಅಲ್ಲದೆ ಟ್ವಿಟ್ಟರ್ ನಲ್ಲಿ ThankYouRoman ಹೆಸರಿನ ಹ್ಯಾಶ್ ಟ್ಯಾಗ್ ನಡಿ ಅಪಾರ ಸಂಖ್ಯೆಯ ಅಭಿಮಾನಿಗಳು ರೈನ್ಸ್ ಅವರ ಬೆಂಬಲಕ್ಕೆ ನಿಂತಿದ್ದಾರೆ.
"ನೀವು ನನಗೆ ಸದಾ ಬೆಂಬಲ ನೀಡಿದ್ದಿರಿ, ಇದು ನನ್ನ ನಿವೃತ್ತಿಯೆಂದು ಭಾವಿಸಬೇಕಾಗಿಲ್ಲ. ನಾನು ಈ ಮಾರಕ ರೋಗವನ್ನು ಗೆದ್ದು ಮತ್ತೆ ಅಖಾಡಕ್ಕೆ ಮರಳುತ್ತೇನೆ" ಅವರು ಹೇಳಿದರು.