ಪ್ಯಾರಿಸ್: ಚೈನೀಸ್ ತಾಯ್ಪೆಯ ತಾಯ್ ತ್ಝು ಯಿಂಗ್ ವಿರುದ್ಧ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತೆ ಮುಗ್ಗರಿಸಿದ್ದು, ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಕೂಟದ ಮಹಿಳೆಯರ ವಿಭಾಗದ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಸೈನಾ ಸೋಲುಂಡಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ್ದ ಈ ಪಂದ್ಯದಲ್ಲಿ ಭಾರತದ ಸೈನಾ ನೆಹ್ವಾಲ್ 20-22, 11-21ರ ನೇರ ಸೆಟ್ ಗಳ ಅಂತರದಲ್ಲಿ ಅಗ್ರ ಶ್ರೇಯಾಂಕಿತೆ, ಚೈನೀಸ್ ತಾಯ್ಪೆಯ ತಾಯ್ ತ್ಝು ಯಿಂಗ್ ಎದುರು ಸೋಲು ಕಂಡಿದ್ದಾರೆ.
ಇನ್ನು ಕಳೆದ ಭಾನುವಾರ ಸೈನಾ ನೆಹ್ವಾಲ್ ಇದೇ ಚೈನೀಸ್ ತಾಯ್ಪೆಯ ತಾಯ್ ತ್ಝು ಯಿಂಗ್ ಎದುರು ಡೆನ್ಮಾರ್ಕ್ ಓಪನ್ ಫೈನಲ್ ಪಂದ್ಯದಲ್ಲಿ 13-21, 21-13, 6-21ರಲ್ಲಿ ನಿರಾಸೆ ಅನುಭವಿಸಿ ಬೆಳ್ಳಿ ಪದಕ್ಕೆ ತೃಪ್ತಿ ಪಟ್ಟುಕೊಂಡಿದ್ದರು