ಸೈಲಿಂಗ್ ಗಾಗಿ ಶಾಲೆಯನ್ನೇ ಬಿಟ್ಟರು: ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ, ಕಂಚು ಗೆದ್ದರು!
ಏಶ್ಯಾಡ್ ಸೈಲಿಂಗ್ ಸ್ಪರ್ಧೆಯಲ್ಲಿ ಭಾರತ 3 ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಎಲ್ಲಾ ಕ್ರೀಡೆ-ಕ್ರೀಡಾಪಟುಗಳ ಸಾಧನೆ ಹಿಂದೆ ಅಚ್ಚರಿಯ, ಪ್ರೇರಣೆ ನೀಡುವ ಕಥೆಗಳು ಬೆಸೆದುಕೊಂಡಿರುತ್ತೆ, ಸೈಲಿಂಗ್ ನಲ್ಲಿ ಪದಕ ಗೆದ್ದ ಯುವಕರ ಸಾಧನೆಯ ಹಿಂದೆಯೂ ಇಂಥಹದ್ದೇ ಕಥೆಯೊಂದು ಇದೆ.
ಸೈಲಿಂಗ್ ನಲ್ಲಿ ಸಾಧನೆ ಮಾಡಲು ವರುಣ್ ಅಶೋಕ್ ಠಾಕ್ಕರ್, ಕೆಸಿ ಗಣಪತಿ ಶಾಲೆಯನ್ನೇ ಬಿಟ್ಟಿದ್ದರು. ಈಗ ಏಷ್ಯನ್ ಗೇಮ್ಸ್ ನಲ್ಲಿ ಪದಕ್ ಅಗೆದ್ದು ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಕ್ರೀಡಾ ಸಾಧನೆಗಾಗಿ ಶಾಲೆಯನ್ನು ತೊರೆದಿರುವ ಬಗ್ಗೆ ಅಶೋಕ್ ಠಾಕ್ಕರ್ ಹಾಗೂ ಕೆಸಿ ಗಣಪತಿಗೆ ಯಾವುದೇ ಪಶ್ಚಾತ್ತಾಪವಿಲ್ಲ. ಒಂದು ಕಾಲದಲ್ಲಿ ಕ್ರೀಡೆಯಲ್ಲಿ ಪ್ರಬಲ ಎದುರಾಳಿಗಳಾಗಿದ್ದ ಠಾಕ್ಕರ್ ಹಾಗೂ ಕೆಸಿ ಗಣಪತಿ ಏಷ್ಯನ್ ಗೇಮ್ಸ್ ನಲ್ಲಿ ಒಟ್ಟಾಗಿ ಕಂಚಿನ ಪದಕ ಗೆದ್ದಿದ್ದಾರೆ.
"ಕಿರಿಯ ವಯಸ್ಸಿನಲ್ಲಿ ನಮ್ಮ ನಡುವೆಯೇ ಪೈಪೋಟಿ ಏರ್ಪಡುತ್ತಿತ್ತು, ಈ ವ್ಯಕ್ತಿಯೊಂದಿಗೆ ಸೇರಿ ಪದಕ ಗೆದ್ದಿರುವುದು ಅತ್ಯಂತ ಸಂತಸ ಮೂಡಿಸಿದೆ, ನಾವು 2011 ಕ್ಕೂ ಮುನ್ನ ಪ್ರಬಲ ಎದುರಾಳಿಗಾಳಿದ್ದೆವು, ಆದರೆ ಆ ನಂತರ ಒಂದೇ ತಂಡದಲ್ಲಿ ಸೇರ್ಪಡೆಗೊಂಡೆವು ಎಂದು ಠಾಕ್ಕರ್ ಕೆಸಿ ಗಣಪತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
9 ನೇ ತರಗತಿಯಲ್ಲಿದ್ದಾಗ ನಾನು ಶಾಲೆಯನ್ನು ತೊರೆದು ಸೈಲಿಂಗ್ ಕಲಿಯಲು ಪ್ರಾರಂಭಿಸಿದೆ, ನಂತರ ಮುಕ್ತ ಶಿಕ್ಷಣ ವ್ಯವಸ್ಥೆಯ ಮೂಲಕ ಶಿಕ್ಷಣ ಕಲಿತೆ ಎಂದು ಗಣಪತಿ ಹೇಳಿದ್ದಾರೆ. ನಮ್ಮ ಶಾಲೆಯಲ್ಲಿ ವರ್ಷಕ್ಕೆ 10 ದಿನ ಮಾತ್ರ ರಜೆ ತೆಗೆದುಕೊಳ್ಳಬಹುದಾಗಿತ್ತು. ಆದರೆ ಇಷ್ಟು ಕಡಿಮೆ ಅವಧಿಯಲ್ಲಿ ಸೈಲಿಂಗ್ ನಲ್ಲಿ ಪ್ರಭುತ್ವ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಸೈಲಿಂಗ್ ಫುಲ್ ಟೈಮ್ ಜಾಬ್ ಎನ್ನುತ್ತಾರೆ ಗಣಪತಿ. 2011 ರಿಂದ ಠಾಕ್ಕರ್ ಹಾಗೂ ಗಣಪತಿ ಇಬ್ಬರೂ ವಾರಕ್ಕೆ 6 ದಿನಗಳ ಕಾಲ ಚೆನ್ನೈ ನಲ್ಲಿ ತರಬೇತಿ ಪಡೆಯುತ್ತಿದ್ದರು. ಪೂರ್ಣಾವಧಿ ಸೈಲಿಂಗ್ ತರಬೇತಿಯಲ್ಲಿ ತೊಡಗಿಸಿಕೊಳ್ಳುವ ತಮ್ಮ ನಿರ್ಧಾರಕ್ಕೆ ಪೋಷಕರೂ ಸಾಥ್ ನೀಡಿದರು ಎನ್ನುತ್ತಾರೆ ಕೆಸಿ ಗಣಪತಿ ಹಾಗೂ ಅಶೋಕ್ ಠಾಕ್ಕರ್