ಕ್ರೀಡೆ

ಜೂನಿಯರ್ ಕುಸ್ತಿ ಚಾಂಪಿಯನ್ ಶಿಪ್: ದೀಪಕ್ ಪೂನಿಯಾ  ವಿಶ್ವ ಚಾಂಪಿಯನ್ 

Raghavendra Adiga

ಎಸ್ಟೋನಿಯಾ: ಎಸ್ಟೋನಿಯಾದ ಟ್ಯಾಲಿನ್‌ನಲ್ಲಿ ನಡೆದ ಜೂನಿಯರ್ ವಿಶ್ವ ಚಾಂಪಿಯನ್ ಕುಸ್ತಿ ಪಂದ್ಯಾವಳಿಯಲ್ಲಿ ರಷ್ಯಾದ ಅಲಿಕ್ ಶೆಬ್ಜುಖೋವ್ ಅವರನ್ನು ಮಣಿಸಿ ದೀಪಕ್ ಪೂನಿಯಾ ಬಂಗಾರದ ಪದಕ ಗಳಿಸಿಕೊಂಡಿದ್ದಾರೆ. ಈ ಮೂಲಕ ಪೂನಿಯಾ ಕಳೆದ 18 ವರ್ಷಗಳಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಕುಸ್ತಿಪಟು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

86 ಕೆಜಿ ಪುರುಷರ ಫ್ರೀಸ್ಟೈಲ್ ಪಂದ್ಯದದಲ್ಲಿ ಪೂನಿಯಾ ಈ ಸಾಧನೆ ಮಾಡಿದ್ದಾರೆ.ಇಷ್ಟರ ನಡುವೆ ಪಂದ್ಯದ ಕಡೇ ಕ್ಷಣ ಇಬ್ಬರೂ ಸ್ಪರ್ಧಿಗಳು2-2 ಸಮಾನ ಅಂಕ ಗಳಿಸಿಕೊಂಡಿದ್ದರು. ಆದರೆ ಭಾರತೀಯ ಕ್ರೀಡಾಪಟು ಕೊನೆಯ ಪಾಯಿಂಟ್ ಗಳಿಸಿದ್ದರಿಂದ ಆತನನ್ನೇ ಚಾಂಪಿಯನ್ ಎಂದು ಘೋಷಿಸಲಾಗಿತ್ತು.

ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಕೊನೆಯ ಭಾರತೀಯ ರಮೇಶ್ ಕುಮಾರ್ (69 ಕೆಜಿ) ಮತ್ತು ಪಲ್ವೀಂದರ್ ಸಿಂಗ್ ಚೀಮಾ (130 ಕೆಜಿ) ಅವರು 2001 ರಲ್ಲಿ ಈ ಪ್ರಶಸ್ತಿ ಜಯಿಸಿದ್ದರು.

2016 ರ ಕೆಡೆಟ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದು ಸಾಧನೆ ಮಾಡಿದ್ದ ಪೂನಿಯಾ ಫೈನಲ್ಸ್ ಮುನ್ನ ಹಂಗೇರಿಯ ಮಿಲನ್ ಕೊರ್ಸೊಗ್ ಅವರನ್ನು 10-1 ಗೋಲುಗಳಿಂದ ಸೋಲಿಸಿದರು. ನಂತರ ಅವರು ಕೆನಡಾದ ಹಂಟರ್ ಲೀ ಅವರನ್ನು 5-1ರಿಂದ ಸೋಲಿಸಿದ್ದರು.

SCROLL FOR NEXT