ಪ್ರಣಯ್ 
ಕ್ರೀಡೆ

ಬಿಡಬ್ಲ್ಯೂಎಫ್ ವಿಶ್ವ ಬ್ಯಾಡ್ಮಿಂಟನ್: ಪ್ರಣಯ್ ಗೆ ನಿರಾಸೆ

ಬಾಸೆಲ್ ಭರವಸೆಯ ಆಟಗಾರ ಎಚ್.ಎಸ್ ಪ್ರಣಯ್ ಅವರು ಇಲ್ಲಿ ನಡೆದಿರುವ ಬಿಡಬ್ಲ್ಯೂಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಮೂರನೇ ಸುತ್ತಿನಲ್ಲಿ ಆಘಾತ ಅನುಭವಿಸಿದ್ದಾರೆ. 

ಬಾಸೆಲ್: ಬಾಸೆಲ್ ಭರವಸೆಯ ಆಟಗಾರ ಎಚ್.ಎಸ್ ಪ್ರಣಯ್ ಅವರು ಇಲ್ಲಿ ನಡೆದಿರುವ ಬಿಡಬ್ಲ್ಯೂಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಮೂರನೇ ಸುತ್ತಿನಲ್ಲಿ ಆಘಾತ ಅನುಭವಿಸಿದ್ದಾರೆ. 

ಗುರುವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಪ್ರಣಯ್ 19-21, 12-21 ರಿಂದ ಜಪಾನ್ ನ ಕೆಂಟೊ ಮೊಮೊಟೊ ವಿರುದ್ಧ ಎರಡು ನೇರ ಸೆಟ್ ಗಳಲ್ಲಿ ಪರಾಜಯಹೊಂದಿದರು. ಪ್ರಣಯ್ ಇದೇ ಆಟಗಾರನ ವಿರುದ್ಧ ಆರು ಬಾರಿ ಮುಖಾಮುಖಿಯಾಗಿದ್ದು, ಆರರಲ್ಲೂ ಸೋಲು ಕಂಡಿದ್ದಾರೆ. 

ಮೊದಲ ಗೇಮ್ ನ ಆರಂಭದಲ್ಲಿ 3-3 ಅಂಕಗಳಿಂದ ಸಮಬಲ ಸಾಧಿಸಿದ್ದ ಪ್ರಣಯ್, ನಂತರ ಕೊಂಚ ಹಿನ್ನಡೆ ಅನುಭವಿಸಿದರು. ಬಳಿಕ ಭರ್ಜರಿ ಪ್ರದರ್ಶನ ನೀಡಿದ ಅವರು, 12-12 ಹಾಗೂ 14-14 ರಿಂದ ಸಮಬಲ ಸಾಧಿಸಿ ಎದುರಾಳಿಗೆ ಶಾಕ್ ನೀಡಿದರು. ಆದರೆ, ಕೊನೆಯಲ್ಲಿ ಜಪಾನ್ ಆಟಗಾರ ಅಮೋಘವಾಗಿ ಆಡಿ ಜಯ ಸಾಧಿಸಿದರು. ಎರಡನೇ ಹಾಗೂ ನಿರ್ಣಾಯಕ ಗೇಮ್ ನಲ್ಲೂ ಪ್ರಣಯ್ ಅಂಕಗಳಿಕೆಯಲ್ಲಿ ಹಿನ್ನಡೆ ಅನುಭವಿಸಿದರು. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತಿಲ್ಲ: ದೆಹಲಿಯಲ್ಲಿ ಡಿಕೆ ಶಿವಕುಮಾರ್

ಸಂಚಾರ್ ಸಾಥಿ ಆ್ಯಪ್ ನಿಂದ Snooping ಅಸಾಧ್ಯ; ಪ್ರೀ-ಇನ್ಸ್ಟಾಲ್ ಕಡ್ಡಾಯ ಆದೇಶ ವಾಪಸ್: ಸಚಿವ ಸಿಂಧಿಯಾ; Video

ಬೆಂಗಳೂರಿನಲ್ಲಿ ಇಬ್ಬರು ವಿದೇಶಿ ಪ್ರಜೆಗಳ ಬಂಧನ; 29 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ

Anantapur: ಶಾಸಕನ ರಾಸಲೀಲೆ Video ವೈರಲ್; ಶಿಕ್ಷಕಿ ಜೊತೆಗಿನ ಖಾಸಗಿ ಕ್ಷಣಗಳ ವಾಟ್ಸಪ್ ನಲ್ಲಿ ಹರಿಬಿಟ್ಟ MLA!

HR88B8888: ದಾಖಲೆ ಮೊತ್ತಕ್ಕೆ ಕಾರಿನ ನಂಬರ್ ಗೆ ಬಿಡ್ ಮಾಡಿದ್ದ ಉದ್ಯಮಿಗೆ ಸಂಕಷ್ಟ; ಆಸ್ತಿ ಕುರಿತು ಸರ್ಕಾರ ತನಿಖೆ!

SCROLL FOR NEXT