ಸಂಗ್ರಹ ಚಿತ್ರ 
ಕ್ರೀಡೆ

ದಕ್ಷಿಣ ಏಷ್ಯನ್ ಕ್ರೀಡಾಕೂಟ: ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತಕ್ಕೆೆ 8 ಪದಕ ಖಚಿತ

ಇಲ್ಲಿ ನಡೆಯುತ್ತಿರುವ 13ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳ ಪದಕ ಬೇಟೆ ಮುಂದುವರಿದಿದೆ.

ಪೊಖಾರ : ಇಲ್ಲಿ ನಡೆಯುತ್ತಿರುವ 13ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳ ಪದಕ ಬೇಟೆ ಮುಂದುವರಿದಿದೆ.

ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತಕ್ಕೆೆ ಒಟ್ಟು ಎಂಟು ಪದಕಗಳು ಬುಧವಾರ ಖಚಿತವಾಗಿವೆ. ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಅಗ್ರ ಶ್ರೇಯಾಂಕಿತ ಸಿರಿಲ್ ವರ್ಮಾ ಅವರು ಪಾಕಿಸ್ತಾನದ ಮುರಾದ್ ಅಲಿ ಅವರ ವಿರುದ್ಧ 21-12, 21-17 ಅಂತರದಲ್ಲಿ ಕ್ವಾರ್ಟರ್ ಫೈನಲ್ಸ್‌ ಗೆದ್ದು ಸೆಮಿಫೈನಲ್ ತಲುಪಿದ್ದಾರೆ. 

ಮಹಿಳೆಯರ ಸಿಂಗಲ್ಸ್‌ ಕ್ವಾರ್ಟರ್ ಫೈನಲ್ಸ್‌ ಹಣಾಹಣಿಯಲ್ಲಿ ಗಾಯತ್ರಿ ಗೋಪಿಚಂದ್ ಅವರು 21-15, 21-16 ಅಂತರದಲ್ಲಿ ಪಾಕ್‌ನ ಮಹೂರ್ ಶಹ್ಜಾದ್ ಅವರನ್ನು ಮಣಿಸಿ ಉಪಾಂತ್ಯಕ್ಕೆೆ ತಲುಪಿದ್ದಾಾರೆ. ಆ ಮೂಲಕ ಇವರಿಬ್ಬರು ಕಂಚಿನ ಪದಕ ಖಚಿತಪಡಿಸಿಕೊಂಡಿದ್ದಾರೆ

ಭಾರತದ ಅಶ್ಮಿತಾ ಚಲಿಹ ಅವರು ಪಾಕ್‌ನ ಪಲ್ವಾಷ ಬಶೀರ್ ವಿರುದ್ಧ 21-9, 21-7 ಅಂತರದಲ್ಲಿ ಗೆದ್ದು ಗಾಯತ್ರಿ ಜತೆ ಸೆಮಿಗೆ ಲಗ್ಗೆೆ ಇಟ್ಟಿದ್ದಾರೆ. 

ಮತ್ತೊಬ್ಬ ಭಾರತದ ಪುರುಷರ ಸಿಂಗಲ್ಸ್‌ ಆಟಗಾರ ಅರ್ಯಮನ್ ಟಂಡನ್ ಅವರು ರಂಥುಷ್ಕಾ ಕರುಣತಿಲಕೆ ಅವರ ವಿರುದ್ಧ 21-17, 21-17 ಅಂತರದಲ್ಲಿ ಗೆದ್ದು ಉಪಾಂತ್ಯ ತಲುಪಿದ್ದಾರೆ.

ಭಾರತೀಯ ಮಹಿಳಾ ಡಬಲ್ಸ್ ಜೋಡಿಗಳಾದ ಕುಹೂ ಗರ್ಗ್-ಅನೌಷ್ಕಾ ಪರಿಖ್ ಮತ್ತು ಮೇಘನಾ ಜಕ್ಕಂಪುಡಿ-ಎಸ್ ನೆಲಕುರ್ತಿ ಕೂಡ ತಮ್ಮ ಬಾಂಗ್ಲಾದೇಶದ ಎದುರಾಳಿಗಳನ್ನು ಸೋಲಿಸಿ ಸೆಮಿಫೈನಲ್‌ಗೆ ತಲುಪಿದ್ದಾರೆ 

ಮಿಶ್ರ ಡಬಲ್ಸ್‌ನಲ್ಲಿ, ಅಗ್ರ ಶ್ರೇಯಾಂಕಿತರಾದ ಧ್ರುವ್ ಕಪಿಲಾ ಮತ್ತು ಜಕ್ಕಂಪುಡಿ ಅವರು 21-14, 26-24ರಲ್ಲಿ ಪಂದ್ಯವನ್ನು ತೀವ್ರ ಸೆಣೆಸಾಟದ ಬಳಿಕ ಗೆದ್ದಿದ್ದಾರೆ

ಆದರೆ ಅಗ್ರ ಶ್ರೇಯಾಂಕಿತ ಜೋಡಿ ಅರುಣ್ ಜಾರ್ಜ್ ಮತ್ತು ಸನ್ಯಾಮ್ ಶುಕ್ಲಾ ಶ್ರೀಲಂಕಾದ ಎಸ್ ಡಯಾಸ್ ಅಂಗೋಡಾ ವಿದ್ಯಾನಾಲಗೆ ಮತ್ತು ಬಿ ತಾರಿಂದು ಡಲ್ಲೆವ್ ವಿರುದ್ಧ 10-21, 21-23ರಲ್ಲಿ ಸೋಲುಂಡು ನಿರಾಶೆ ಅನುಭವಿಸಿದ್ದಾರೆ.ಆದಾಗ್ಯೂ, ಕೃಷ್ಣ ಗರಗಾ ಮತ್ತು ಕಪಿಲಾ ಅವರು ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಪದಕ ಭರವಸೆಯನ್ನು ಜೀವಂತವಾಗಿರಿಸಿಕೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಯಾವುದೇ ನೋವಿಲ್ಲ, ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ; ಸಿದ್ದರಾಮಯ್ಯ ಘೋಷಣೆ

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿದ್ದು ನಿರ್ಗಮನದ ಬಳಿಕ ಅಸಮಾಧಾನ ತಣಿಸಲು ಕಾಂಗ್ರೆಸ್ ಮಾಸ್ಟರ್‌ಪ್ಲ್ಯಾನ್: 4 DCM ಹುದ್ದೆ ಸೃಷ್ಟಿಗೆ ಚಿಂತನೆ, ಜಮೀರ್, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ಹೆಸರು ಫೈನಲ್?

SCROLL FOR NEXT