ಕ್ರೀಡೆ

ಚಿತ್ರ ವರದಿ: ತೇಜಸ್ ವಿಮಾನದಲ್ಲಿ ಹಾರಾಡಿದ ಪಿವಿ ಸಿಂಧೂ!

Raghavendra Adiga
ಬೆಂಗಳೂರು: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ ಏರೋ ಇಂಡಿಯಾ ೨೦೧೯ ಏರ್ ಶೋ ನಲ್ಲಿ ಭಾಗವಹಿಸಿದ್ದಾರೆ. 
ಅವರು ಏರ್ ಶೋ ನ "ಮಹಿಳಾ ದಿನ" ಪ್ರಯುಕ್ತ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ.
ಪೈಲಟ್ ವಿಂಗ್ ಕಮಾಂಡರ್ ಸಿದ್ದಾರ್ಥ ಅವರೊಂದಿಗೆ ಏಕ  ಇಂಜಿನ್ ನ ಬಹುಪಯೋಗಿ ತೇಜಸ್‌ನ ಲ್ಲಿ ಪಿ.ವಿ.ಸಿಂಧು ಅವರು ಸುಮಾರು 20 ನಿಮಿಷಗಳ ಕಾಲ ಹಾರಾಟ ನಡೆಸಿದರು
ಸಿಂಧೂ ತೇಜಸ್ ಸಹ ಪೈಲಟ್ ಆಗಿ ವಿಮಾನದಲ್ಲಿ ಹಾರಾಟ ಕೈಗೊಂಡಿದ್ದು ಈ ರೀತಿ ತೇಜಸ್ ವಿಮಾನದಲ್ಲಿ ಸಹ ಪೈಲಟ್ ಆಗಿ ವಿಮಾನವೇರಿದ ಪ್ರಥಮ ಮಹಿಳೆ ಎನಿಸಿದರು.
ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಧು, ಇದೊಂದು ಅದ್ಭುತ ಅನುಭವ. ಮಹಿಳಾ ದಿನದ ಅಂಗವಾಗಿ ನನಗೆ ಈ ಹಾರಾಟದ ಅನುಭವ ನೀಡಿದ ಡಿಆರ್ ಡಿಒ ಹಾಗೂ ವಾಯುಪಡೆಗೆ ಧನ್ಯವಾದಗಳು. ವಿಮಾನದ ಹಾರಾಟದ ಜೊತೆಗೆ, ಹಲವು ಕಸರತ್ತುಗಳನ್ನು ಕೂಡ ನಡೆಸಿದ್ದು ಮುಧ ನೀಡಿತು.ಇದೇ ಮೊದಲ ಬಾರಿಗೆ ಮಹಿಳಾ ಕ್ರೀಡಾಪಟುವಿಗೆ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಲು ಅವಕಾಶ ದೊರೆತಿದೆ. ಇದನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ತಿಳಿಸಿದರು. 

ವಿಂಗ್ ಕಮಾಂಡರ್ ಸಿದ್ಧಾರ್ಥ ಮಾತನಾಡಿ, ಆರಂಭದಲ್ಲಿ ನಾವು ಸಣ್ಣ ಪುಟ್ಟ ಕಸರತ್ತುಗಳನ್ನು ನಡೆಸಿದೆವು. ಸಿಂಧು ಅವರು ಇದಕ್ಕೆ ಹೊಂದಿಕೊಳ್ಳುತಾರೆಯೇ ಎಂದು ಪರಿಶೀಲಿಸಬೇಕಿತ್ತು. ಆದರೆ, ಅವರು ಬಹುಬೇಗ ಕಸರತ್ತುಗಳಿಗೆ ಹೊಂದಿಕೊಂಡಿದ್ದರಿಂದ ನಂತರ ಕಠಿಣ ಕಸರತ್ತುಗಳನ್ನು ಕೂಡ ನಡೆಸಿದೆವು ಎಂದರು. 
SCROLL FOR NEXT