ಕ್ರೀಡೆ

ಆಸ್ಟ್ರೇಲಿಯನ್ ಓಪನ್ : ನಡಾಲ್ ವಿರುದ್ಧ ಗೆಲುವು ಸಾಧಿಸಿದ ಜೊಕೊವಿಕ್ ಚಾಂಪಿಯನ್

Nagaraja AB

ಸಿಡ್ನಿ: ಅಗ್ರ ಶ್ರೇಯಾಂಕಿತ ಸೆರ್ಬಿಯಾದ ನೊವಾಕ್ ಜೊಕೊವಿಕ್   ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ 2019 ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಮೆಂಟ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಇಂದು ನಡೆದ ಪುರುಷ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಸ್ಪೇನ್ ನ ರಾಫೆಲ್ ನಡಾಲ್ ವಿರುದ್ಧ 6-3, 6-3 ನೇರ ಸೆಟ್ ಅಂತರದ  ಗೆಲುವು ಸಾಧಿಸಿದ ಜೊಕೊವಿಕ್ ಪ್ರಶಸ್ತಿಗೆ ಮುತ್ತಿಕ್ಕಿದರು.

ಈ ಮೂಲಕ ವೃತ್ತಿ ಜೀವನದಲ್ಲಿ 15 ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. ಹಾಗೆಯೇ  ದಾಖಲೆಯ ಏಳನೇಬಾರಿಗೆ ಆಸ್ಟ್ರೇಲಿಯನ್  ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.  ಜೊಕೊವಿಕ್ ಕೊನೆಯ ಬಾರಿಗೆ 2016ರಲ್ಲಿ
ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದರು.

ಮತ್ತೊಂದೆಡೆ  25 ನೇ ಬಾರಿಗೆ ಗ್ರ್ಯಾನ್ ಸ್ಲಾಮ್ ಫೈನಲ್ ನಲ್ಲಿ ಪೈಪೋಟಿ ನಡೆಸಿದ ನಡಾಲ್ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಡಬೇಕಾಯಿತು. ಇದರೊಂದಿಗೆ ನಡಾಲ್- ಜೊಕೊವಿಕ್  ಗ್ರ್ಯಾನ್ ಸ್ಲಾಮ್ ಗೆಲುವುಗಳ ಅಂತರ ಕೇವಲ 2ಕ್ಕೆ ಇಳಿಕೆಯಾಗಿದೆ. ನಡಾಲ್ ಇದುವರೆಗೆ 17 ಬಾರಿ ಗ್ರ್ಯಾನ್ ಸ್ಲಾಮ್ ಮುಕುಟ ಧರಿಸಿದ್ದಾರೆ.

SCROLL FOR NEXT