ಕ್ರೀಡೆ

ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌: ಸುಂದರ್ ಸಿಂಗ್ ಗೆ ಸ್ವರ್ಣ ಪದಕ

Raghavendra Adiga

ದುಬೈ: ಅಗ್ರ ಜಾವೆಲಿನ್ ಥ್ರೋ ಪಟು ಸುಂದರ್ ಸಿಂಗ್ ಗುಜ್ರಾರ್ ಅವರು ಭುಜದ ಗಾಯ ಮೆಟ್ಟಿ ನಿಂತು ಇಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಇದರೊಂದಿಗೆ ಪ್ರಸಕ್ತ ಆವೃತ್ತಿಯನ್ನು ಸುಂದರ್ ಸಿಂಗ್ ಗುಜ್ರಾರ್ ಯಶಸ್ವಿಯಾಗಿ ಮುಗಿಸಿದ್ದಾರೆ.

ಕಳೆದ 2017ರ ಲಂಡನ್ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದ ಸುದರ್, ಇದೀಗ ದೋಹಾದಲ್ಲಿ ನಡೆಯುತ್ತಿರುವ ಪ್ಯಾರಾ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಮತ್ತೊಂದು ಸ್ವರ್ಣ ಪದಕ ಸಾಧನೆ ಮಾಡುವ ಮೂಲಕ ಭಾರತದ ದೇವೇಂದ್ರ ಜಜ್ರಾರಿಯಾ ಅವರ ಸಾಧನೆ ಸರಿಗಟ್ಟಿದ್ದಾರೆ. ದೇವೇಂದ್ರ ಜಜ್ರಾರಿಯಾ ಅವರು 2013ರ ಲಿಯಾನ್ ಹಾಗೂ 2015 ರ ದೋಹಾ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕ ತನ್ನದಾಗಿಸಿಕೊಂಡಿದ್ದರು.

ಫೈನಲ್ ಸುತ್ತಿನ ಐದನೇ ಪ್ರಯತ್ನದವರೆಗೂ ಸುಂದರ್ ಸಿಂಗ್ ಎರಡನೇ ಸ್ಥಾನದಲ್ಲೇ ಮುಂದುವರಿದಿದ್ದರು. ಆದರೆ, ಆರನೇ ಪ್ರಯತ್ನದಲ್ಲಿ ಜಾವೆಲಿನ್ ಅನ್ನು 61.22 ಮೀ. ಎಸೆಯುವ ಮೂಲಕ ಅಗ್ರ ಸ್ಥಾನಕ್ಕೆ ಜಿಗಿದರು. ಐದು ಪ್ರಯತ್ನಗಳಲ್ಲಿ ಮುನ್ನಡೆಯಲ್ಲಿದ್ದ ಶ್ರೀಲಂಕಾದ ದಿನೇಶ್ ಪಿ. ಹೆರಾಥ್ ಅವರು ಎರಡನೇ ಸ್ಥಾನಕ್ಕೆ ತೃಪ್ತಗೊಂಡರು.

ಈ ಚಾಂಪಿಯನ್‌ಶಿಪ್‌ಗಳಿಂದ ಭಾರತಕ್ಕೆ ಈಗ ಎರಡು ಚಿನ್ನದ ಪದಕಗಳು, ಒಂದು ಬೆಳ್ಳಿ ಮತ್ತು ಕಂಚು ಗೆದ್ದುಕೊಂಡಿದೆ.

SCROLL FOR NEXT