ಕ್ರೀಡೆ

ಭಾರತಕ್ಕೆ ಬ್ಯಾಡ್ಮಿಂಟನ್ ಪ್ರಶಸ್ತಿ ಹ್ಯಾಟ್ರಿಕ್! ಧಮಮೇರ್ ಗೆ ಮಯನ್ಮಾರ್ ಇಂಟರ್ ನ್ಯಾಷನಲ್ ಚಾಂಪಿಯನ್ ಪಟ್ಟ

Raghavendra Adiga

ಯಾಂಗೊನ್: ಭಾರತೀಯ ಬ್ಯಾಡ್ಮಿಂಡನ್ ತಾರೆ ಕೌಶಲ್ ಧರ್ಮಮೇರ್ ಮ್ಯಾನ್ಮಾರ್ ಇಂಟರ್ ನ್ಯಾಷನಲ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಈ ಮೂಲಕ ಭಾರತ ಒಂದೇ ದಿನ ಮೂರು ಬ್ಯಾಡ್ಮಿಂಟನ್ ಪ್ರಶಸ್ತಿ ಗಳಿಸಿ ಹ್ಯಾಟ್ರಿಕ್ ಸಾಧನೆ ಮಾಡಿದಂತಾಗಿದೆ.  


ಇಂಡೋನೇಷಿಯಾದ ಕರೋನೋ ಕರೋನೋ ವಿರುದ್ಧ ನಡೆದಿದ್ದ ಅಂತಿಮ ಸುತ್ತಿನ ಹೋರಾಟದಲ್ಲಿ ಧರ್ಮಮೇರ್  18-21, 21-14 21-11 ಸೆಟ್ ಗಳಿಂದ ಜಯಗಳಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರು. ಸತತ ಒಂದು ಗಂಟೆಗಳ ಕಾಲ ನಡೆದ ಕಠಿಣ ಹೋರಾಟ ಇದಾಗಿತ್ತು.

ಭಾರತದ ಪಾಲಿಗಿಂದು ಮೂರನೇ ಬ್ಯಾಡ್ಮಿಂಟನ್ ಚಾಂಪಿಯನ್ ಪಟ್ಟ ಸಿಕ್ಕಿದ್ದು ಇದಕ್ಕೆ ಮುನ್ನ ಲಕ್ಷ್ಯ ಸೇನ್ ಬೆಲ್ಜಿಯಂ ಇಂಟರ್ ನ್ಯಾಷನಲ್ ಚಾಲೆಂಜ್ ಕಿರೀಟಗೆದ್ದರೆ ಸೌರಭ್ ವರ್ಮಾ  75,000 ಯುಎಸ್ ಡಾಲರ್ ಮೊತ್ತದ ಯೆಟ್ನಾಂ ಓಪನ್ ಬಿಡಬ್ಲ್ಯೂಎಫ್ ಟೂರ್ ಸೂಪರ್ 100 ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹ್ಯಾಟ್ಜೋರ್ ಇಂಟರ್‌ನ್ಯಾಷನಲ್ ಪ್ರಶಸ್ತಿ ಗೆದ್ದಿದ್ದ ಧರ್ಮಮೇರ್ ಸುಧೀರ್ಘ ಕಾಲದಬಳಿಕ ಮತ್ತೊಂದು ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.

ಉದಯ್ ಪವಾರ್ ಬ್ಯಾಡ್ಮಿಂಟನ್ ಅಕಾಡೆಮಿಯಯವರಾದ ಧರ್ಮಮೇರ್ ವಿಶ್ವ ರ್ಯಾಂಕಿಂಗ್ ನಲ್ಲಿ 187 ನೇ ಸ್ಥಾನದಲ್ಲಿದ್ದಾರೆ.

SCROLL FOR NEXT