ಕ್ರೀಡೆ

'ದಾಖಲೆಗಳ ಸರದಾರ' ಉಸೇನ್ ಬೋಲ್ಟ್‌ ದಾಖಲೆ ಮುರಿದ ಆಲಿಸನ್ ಫೆಲಿಕ್ಸ್‌

Vishwanath S

ದೋಹಾ: ಇಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಅಮೆರಿಕದ ಆಲಿಸನ್ ಫೆಲಿಕ್ಸ್‌ ಅವರು ವೃತ್ತಿ ಜೀವನದ 12ನೇ ಮುಕಟು ಮುಡಿಗೇರಿಸಿಕೊಂಡರು. ಆ ಮೂಲಕ 11 ವಿಶ್ವ ಕಿರೀಟ ಗೆದ್ದಿರುವ ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್‌ ಅವರ ದಾಖಲೆಯನ್ನು ಮುರಿದರು.

ಭಾನುವಾರ ನಡೆದಿದ್ದ ಉದ್ಘಾಟನ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ 4*400 ಮಿಶ್ರ ರಿಲೆ ವಿಭಾಗದಲ್ಲಿ ಯುಎಸ್‌ಎ ಮಿಶ್ರ ರಿಲೆ ತಂಡ ಚಿನ್ನದ ಪದಕ ತನ್ನದಾಗಿಸಿಕೊಂಡಿತು. ಆಲಿಸನ್ ಫೆಲಿಕ್ಸ್‌ ಅವರ ವೃತ್ತಿ ಜೀವನದ 12ನೇ ಹಾಗೂ ತಾಯಿಯಾದ ಬಳಿಕ ಮೊದಲ ಪದಕ ಇದಾಯಿತು. 2005ರಲ್ಲಿ ಇವರು  ಮೊದಲ ಬಾರಿ ಸ್ವರ್ಣ ಪದಕ ಗೆದ್ದಿದ್ದರು.

ಮಿಚೆಲ್ ಚೆರ್ರಿ, ವಿಲ್ಬರ್ಟ್ ಲಂಡನ್, ಕೌರ್ಟನಿ ಒಕೊಲೊ ಹಾಗೂ ಆಲಿಸನ್ ಫೆಲಿಕ್ಸ್‌ ಅವರನ್ನೊಳಗೊಂಡ ಅಮೆರಿಕ ಮಿಶ್ರ ರಿಲೆ ತಂಡ 4*400 ಮೀ. ಅನ್ನು 3:09: 34 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸುವ ಮೂಲಕ ಪ್ರಥಮ ಸ್ಥಾನ ಪಡೆಯಿತು. ಆ ಮೂಲಕ ನೂತನ ವಿಶ್ವ ದಾಖಲೆಯನ್ನು ಮಾಡಿತು. ಜಮೈಕಾ ಎರಡನೇ ಸ್ಥಾನ ಪಡೆದು ಬೆಳ್ಳಿ ಪಡೆದರೆ, ಬಹ್ರೈನ್ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಭಾರತ ತಂಡ ಏಳನೇ ಸ್ಥಾನ ಪಡೆಯಿತು.

SCROLL FOR NEXT