ಕ್ರೀಡೆ

ಕೊವಿಡ್-19 ಎಫೆಕ್ಟ್: ಅಂತರರಾಷ್ಟ್ರೀಯ ಚಾಂಪಿಯನ್ಸ್ ಫುಟ್ಬಾಲ್ ಕಪ್ ರದ್ದು

Lingaraj Badiger

ಬೀಜಿಂಗ್: ಕೊರೋನಾ ವೈರಸ್ ಭೀತಿಯನ್ನು ಗಮನದಲ್ಲಿಟ್ಟುಕೊಂಡು ಅಂತರರಾಷ್ಟ್ರೀಯ ಚಾಂಪಿಯನ್ಸ್ ಕಪ್-2020 ಫುಟ್ಬಾಲ್ ಪಂದ್ಯಾವಳಿಯನ್ನು ರದ್ದುಪಡಿಸಲಾಗಿದೆ ಎಂದು ಸಂಘಟಕರು ಶನಿವಾರ ಖಚಿತಪಡಿಸಿದ್ದಾರೆ.

ಫುಟ್ಬಾಲ್ ಟೂರ್ನಿಯನ್ನು ಮೊದಲ ಬಾರಿಗೆ 2013ರಲ್ಲಿ ಆಯೋಜಿಸಲಾಯಿತು. ಇದು ಏಷ್ಯಾ ಮತ್ತು ಉತ್ತರ ಅಮೆರಿಕಾದಲ್ಲಿ ನಡೆಯುತ್ತದೆ. ಈ ಪಂದ್ಯಾವಳಿಯಲ್ಲಿ ಯುರೋಪಿನ ಅನೇಕ ಗಣ್ಯ ಕ್ಲಬ್‌ಗಳು ಭಾಗವಹಿಸುತ್ತವೆ.

ಕೊರೋನಾದ ಕಾರಣದಿಂದಾಗಿ ಯುರೋಪಿನ ಬಹುತೇಕ ಎಲ್ಲಾ ಲೀಗ್‌ಗಳನ್ನು ಮುಂದೂಡಲಾಗಿದೆ ಅಥವಾ ರದ್ದುಪಡಿಸಲಾಗಿದೆ. ಆಟಗಾರರು ಮತ್ತು ಸಿಬ್ಬಂದಿಗಳ ಸುರಕ್ಷತೆಯು ಅತ್ಯುನ್ನತವಾಗಿದೆ ಎಂದು ಕ್ರೀಡಾ ಸಮೂಹದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡ್ಯಾನಿ ಸಿಲ್ಮನ್ ಹೇಳಿದ್ದಾರೆ.

ಲಾಕ್‌ಡೌನ್ ಮತ್ತು ಸಾಮಾಜಿಕ ಅಂತರದ ನಂತರ, ಅಂತರರಾಷ್ಟ್ರೀಯ ಫುಟ್ಬಾಲ್ ಟೂರ್ನಿ ನಡೆಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ನಾವು ಮುಂದಿನ ವರ್ಷ ಈ ಪಂದ್ಯಾವಳಿಯನ್ನು ಉತ್ತಮ ಕ್ಲಬ್‌ಗಳೊಂದಿಗೆ ಆಯೋಜಿಸಲಿದ್ದೇವೆ ಎಂದಿದ್ದಾರೆ.

SCROLL FOR NEXT