ಕ್ರೀಡೆ

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಿಶಿಷ್ಟ ರೀತಿಯಲ್ಲಿ ಕರೆ ನೀಡಿದ ಉಸೇನ್ ಬೋಲ್ಟ್!

Srinivas Rao BV

ಲಂಡನ್: ಕೊರೊನಾ ವೈರಸ್ ನಿಂದಾಗಿ ಇಡೀ ವಿಶ್ವವೇ ಸದ್ಯ ಸ್ತಬ್ಧಗೊಂಡಿದೆ. ವಿಶ್ವದ ಪ್ರಮುಖ ನಾಯರು ಮತ್ತು ಗಣ್ಯವ್ಯಕ್ತಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಮನೆಯಲ್ಲಿ ಇರುವಂತೆ ಕರೆ ನೀಡಿದ್ದಾರೆ. ಇದೀಗ ಖ್ಯಾತ ಸ್ಪ್ರಿಂಟರ್ ಜಮೈಕಾದ ಉಸೇನ್ ಬೋಲ್ಟ್ ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ತಮ್ಮದೇ ವಿಶಿಷ್ಠ ರೀತಿಯಲ್ಲಿ ಒತ್ತಿ ಹೇಳಿದ್ದಾರೆ.

ಈ ಕುರಿತು ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಅವರು, ಒಲಿಂಪಿಕ್ಸ್ ನಲ್ಲಿ ತಮ್ಮ ಪ್ರತಿಸ್ಪರ್ಧಿಗಳಿಂದ ಅಂತರ ಕಾಯ್ದುಕೊಂಡು ಪದಕ ಗೆದ್ದ ಚಿತ್ರವನ್ನು ಪ್ರಕಟಿಸುವ ಮೂಲಕ ಸಾಮಾಜಿಕ ಅಂತರದ ಹೊಸ ಆಯಾಮವನ್ನು ಪ್ರತಿಪಾದಿಸಿದ್ದಾರೆ. 

ಸ್ಪರ್ಧೆಯ ಅಂತಿಮ ರೇಖೆ ಮುಟ್ಟುವ ಚಿತ್ರವನ್ನು ಪ್ರಕಟಿಸಿರುವ ಅವರು, ಸಾಮಾಜಿಕ ಅಂತರ ಎಂದರೇ ಇದು, ಈಸ್ಟರ್ ಶುಭಾಶಯಗಳು ಎಂದು ಬರೆದಿದ್ದಾರೆ. ಜಗತ್ತಿನಾದ್ಯಂತ ಜೀವಗಳನ್ನು ಬಲಿ ಪಡೆಯುತ್ತಿರುವ ಕೊರೊನಾ ವೈರಸ್ ಸೋಂಕಿನ ವಿರುದ್ಧ ನಾವು ಹೋರಾಟ ನಡೆಸಬೇಕಾದರೆ ಜನರು ಮನೆಯಲ್ಲಿಯೇ ಇರಬೇಕು ಎಂದು ಜಗತ್ತಿನಾದ್ಯಂತ ಕ್ರೀಡಾಪಟುಗಳು ಮನವಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಹ ಕೋವಿಡ್-19 ವಿರುದ್ಧ ದೇಶ ಹೋರಾಟ ನಡೆಸುತ್ತಿರುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತೆ ಕ್ರೀಡಾಪಟುಗಳನ್ನು ಕೋರಿದ್ದರು.

SCROLL FOR NEXT