ಕ್ರೀಡೆ

ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ನಲ್ಲಿ ರಿತು ಫೋಗಾಟ್ ಜೈತ್ರ ಯಾತ್ರೆ ಮುಂದುವರಿಕೆ; ಜೋಮರಿ ಟೋರ್ಸ್ ವಿರುದ್ಧ ಗೆಲುವು

Srinivasamurthy VN

ಸಿಂಗಾಪುರ: ಭಾರತದ ಖ್ಯಾತ ರೆಸ್ಲಿಂಗ್ ಪಟು ರಿತು ಫೋಗಾಟ್ ಅವರ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ನ ಜೈತ್ರ ಯಾತ್ರೆ ಮುಂದುವರೆದಿದ್ದು, ಎಂಎಂಎ ಚಾಂಪಿಯನ್ ಷಿಪ್ ನಲ್ಲಿ ಸತತ 4ನೇ ಗೆಲುವು ಸಾಧಿಸಿದ್ದಾರೆ.

ಸಿಂಗಾಪುರದಲ್ಲಿ ನಡೆದ ಎಂಎಂಎ ಚಾಂಪಿಯನ್ ಷಿಪ್ ನಲ್ಲಿ  ಭಾರತದ ರಿತು ಫೋಗಾಟ್ ಫಿಲಿಪೈನ್ಸ್ ನ ಜೋಮರಿ ಟೋರ್ಸ್ ಅವರನ್ನು ಮಣಿಸಿದ್ದಾರೆ. ಆ ಮೂಲಕ ವೃತ್ತಿಪರ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ನಲ್ಲಿ ತಮ್ಮ ಜೈತ್ರ ಯಾತ್ರೆ ಮುಂದುವರೆಸಿದ್ದಾರೆ. ರಿತು ಅವರಿಗೆ ಎಂಎಂಎ ನಲ್ಲಿ  ಇದು ಸತತ ನಾಲ್ಕನೇ ಗೆಲುವಾಗಿದೆ.

ಈ ಕುರಿತು ಪಂದ್ಯದ ಬಳಿಕ ಮಾತನಾಡಿದ ರಿತು ಅವರು, 'ಜೋಮರಿ ಟೋರ್ಸ್ ನಿಜಕ್ಕೂ ಕಠಿಣ ಎದುರಾಳಿಯಾಗಿದ್ದರು. ನಾನು ನಿರಂತರವಾಗಿ ನನ್ನ ಇತಿಮಿತಿಗಳ ಕುರಿತು ಗಮನ ಹರಿಸಿದ್ದೆ. ಅಂತೆಯೇ ಇದಕ್ಕಿಂತಲೂ ಕಠಿಣ ಪಂದ್ಯಗಳನ್ನು ನನ್ನ ಮುಂದಿದೆ. ಅದಕ್ಕೆ ನಾನು  ಮಾನಸಿಕವಾಗಿ ಸಿದ್ಧಗೊಂಡಿದ್ದೇನೆ. ಒನ್ ವುಮೆನ್ ಅಟಾಮ್ ವೆಯ್ಟ್ ಗ್ರಾಂಡ್ ಪ್ರಿಕ್ಸ್ ಟೂರ್ನಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಳ್ಳುವುದು ನನ್ನ ಮುಂದಿನ ಗುರಿಯಾಗಿದೆ. ಇದಕ್ಕಾಗಿ ನಾನು ಸಾಕಷ್ಟು ಶ್ರಮ ಪಡುತ್ತಿದ್ದೇನೆ. ನನ್ನ ತವರಿಗೆ ಪ್ರಶಸ್ತಿ ತೆಗೆದುಕೊಂಡು ಹೋಗುವ ವಿಶ್ವಾಸ ನನಗಿದೆ  ಎಂದು ಹೇಳಿದ್ದಾರೆ.
 

SCROLL FOR NEXT