ಮಲ್ಲಕಂಬ 
ಕ್ರೀಡೆ

ಖೇಲೋ ಇಂಡಿಯಾದಲ್ಲಿ ಮಲ್ಲಕಂಬದ ಕಸರತ್ತು: ಸಾಂಪ್ರದಾಯಿಕ ಕ್ರೀಡೆಗಳಿಗೆ ವೇದಿಕೆಯಾದ ರಾಷ್ಟ್ರೀಯ ಕೂಟ

ಮುಂದಿನ ವರ್ಷದ ಖೇಲೋ ಇಂಡಿಯಾ ಯೂತ್ ಗೇಮ್ಸ್ ನಲ್ಲಿ ರಾಜ್ಯದ ಪ್ರಸಿದ್ದ ಕ್ರೀಡೆ ಮಲ್ಲಕಂಬ ಸೇರಿ ನಾಲ್ಕು ದೇಶೀಯ ಕ್ರೀಡೆಗಳನ್ನು ಸೇರಿಸಲು ಕೇಂದ್ರ ಕ್ರೀಡಾ ಇಲಾಖೆ ಅನುಮತಿಸಿದೆ.

ನವದೆಹಲಿ: ಮುಂದಿನ ವರ್ಷದ ಖೇಲೋ ಇಂಡಿಯಾ ಯೂತ್ ಗೇಮ್ಸ್ ನಲ್ಲಿ ರಾಜ್ಯದ ಪ್ರಸಿದ್ದ ಕ್ರೀಡೆ ಮಲ್ಲಕಂಬ ಸೇರಿ ನಾಲ್ಕು ದೇಶೀಯ ಕ್ರೀಡೆಗಳನ್ನು ಸೇರಿಸಲು ಕೇಂದ್ರ ಕ್ರೀಡಾ ಇಲಾಖೆ ಅನುಮತಿಸಿದೆ.

ಮಲ್ಲಕಂಬ, ಘಾತ್ಯಾ, ಕಳರಿಪಯಟ್ಟು ಮತ್ತು ತಾಂಗ್ ತಾ ಕ್ರೀಡೆಗಳನ್ನು ಖೇಲೋ ಇಂಡಿಯಾಗೆ ಸೇರಿಸಲು ತೀರ್ಮಾನಿಸಲಾಗಿದೆ.

ಈ ಸಂಬಂಧ ಕ್ರೀಡಾ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ. 

"ಹರಿಯಾಣದ ಪಂಚಕುಲದಲ್ಲಿ ನಡೆಯಲಿರುವ ಖೆಲೋ ಇಂಡಿಯಾ ಯೂತ್ ಗೇಮ್ಸ್ 2021 ಗೆ ಯೋಗಾಸನದ ಜತೆಜತೆಗೆ 4 ದೇಶೀ ಕ್ರೀಡೆಗಳನ್ನು ಸೇರಿಸಲಾಗಿದೆ ಎಂದು ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ. ಭಾರತವು ಸ್ಥಳೀಯ ಆಟಗಳ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ ಮತ್ತು ಇವುಗಳನ್ನು ಸಂರಕ್ಷಿಸಲು, ಉತ್ತೇಜಿಸಲು ಮತ್ತು ಜನಪ್ರಿಯಗೊಳಿಸಲು ನಮ್ಮ ಪ್ರಯತ್ನ ಇದಾಗಿದೆ" ಸಚಿವರು ಟ್ವೀಟ್ ನಲ್ಲಿ ಹೇಳಿದ್ದಾರೆ.

ಇನ್ನೊಂದು ಟ್ವೀಟ್ ನಲ್ಲಿ "ಭಾರತವು ಸ್ಥಳೀಯ ಆಟಗಳ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ, ಪ್ರಧಾನಿ ನರೇಂದ್ರ ಮೋದಿ ವೆಲ್ಲವನ್ನೂ ಸಂರಕ್ಷಿಸಲು ಮತ್ತು ಜನಪ್ರಿಯಗೊಳಿಸಲು ಬಯಸುತ್ತಾರೆ. ಯೋಗಾಸನದ ಜತೆಜತೆಗೆ ಖೇಲೋ ಇಂಡಿಯಾ ಯೂತ್ ಗೇಮ್ಸ್ 2021ಕ್ಕೆ ಕಳರಿಪಯಟ್ಟು, ಮಲ್ಲಕಂಬ, ಘಾತ್ಯಾ,  ಹಾಗೂ ತಾಂಗ್ ತಾ 4 ಸ್ಥಳೀಯ ಆಟಗಳನ್ನು ಸೇರಿಸಲಾಗಿದೆ ಎಂದು ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ!" ಎಂದಿದ್ದಾರೆ.’

ಮಲ್ಲಕಂಬ ಅಪ್ಪಟ ದೇಶೀಯ ಕ್ರೀಡೆ. ಕೆಲ ಮೀಟರ್ಸ್ ಎತ್ತರದ ಕಟ್ಟಿಗೆ ಕಂಬವನ್ನು ಕುಸ್ತಿ ಪಟ್ಟುಗಳ ಸಾಧನೆಗಾಗಿ ಬಳಸಲಾಗುತ್ತಿತ್ತು. ಈ ಹೆಸರೇ ಸೂಚಿಸುವಂತೆ (ಮಲ್ಲ+ಕಂಬ) ಮಲ್ಲರು ಉಪಯೋಗಿಸುವ ಕಂಬ. ಆದರೆ ನಂತರದ ವರ್ಷಗಳಲ್ಲಿ ಇದೇ ಒಂದು ಸ್ವತಂತ್ರ ಕ್ರೀಡೆಯಾಗಿ ರೂಪುಗೊಂಡಿತು.

ಮಲ್ಲಕಂಬಕ್ಕೆ ಅತ್ಯಂತ ಶ್ರೇಷ್ಠ ಪ್ರದರ್ಶನ ಮೌಲ್ಯವಿದೆ. ನೋಡುಗರನ್ನು ಮಂತ್ರಮುಗ್ಧರನ್ನಾಗಿಸಬಲ್ಲ ಇದು ಉಳಿದೆಲ್ಲ ಕ್ರೀಡೆಗಳಿಗೂ ಸಹಕಾರಿ. ರಷ್ಯದಲ್ಲಿ ಜರುಗಿದ 'ಭಾರತ ಉತ್ಸವ ಕಾರ್ಯಕ್ರಮದಲ್ಲಿ ಮಲ್ಲಕಂಬ ಸಾಕಷ್ಟು ಜನಪ್ರಿಯತೆ ಪಡೆಯಿತು. ರಾಜಕಪೂರ್, ನೆಹರೂ, ನಂತರ ರಷ್ಯನ್ನರ ಮನಗೆದ್ದ ಸಂಗತಿಯೆಂದರೆ ಈ ಮಲ್ಲಕಂಬ ಎಂದು ಅಲ್ಲಿನ ಪತ್ರಿಕೆ ಹಾಡಿ ಹೊಗಳಿವೆ. ಈಗೀಗ ವಿದೇಶಗಳಲ್ಲೂ ಸಾಕಷ್ಟು ಪ್ರದರ್ಶನಗಳು ನಡೆಯುತ್ತಲಿದ್ದು ವಿದೇಶಿಯರನ್ನು ಆಕರ್ಷಿಸುತ್ತಲಿದೆ. ಇದರ ಪರಿಣಾಮ ಮಲ್ಲಕಂಬವನ್ನು ಇತರ ಕ್ರೀಡೆಗಳ ಚಟುವಟಿಕೆಯ ತರಬೇತಿಗಾಗಿ ಆಯ್ಕೆಮಾಡಿಕೊಳ್ಳುವಂಥ ಸಂಶೋಧನೆಗಳು ಪ್ರಾರಂಭವಾಗಿವೆ.

ಕೇರಳದ ಪ್ರಾಚೀನ ಯುದ್ಧಕಲೆ ಕಳರಿಪಯಟ್ಟು ವಿಶ್ವಾದ್ಯಂತ ಜನಪ್ರಿಯತೆ ಗಳಿಸಿದೆ. ಘಾತ್ಕಾ ಮತ್ತು ತಾಂಗ್ ತಾ ಕ್ರಮವಾಗಿ ಪಂಜಾಬ್ ಹಾಗೂ ಮಣಿಪುರ ರಾಜ್ಯದ ಸಮರ ಕಲೆಗಳಆಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

SCROLL FOR NEXT