ಕ್ರೀಡೆ

ಏಷ್ಯನ್ ಕುಸ್ತಿ ಮೂರನೇ ದಿನ ಭಾರತದ ಮಹಿಳೆಯರಿಗೆ 3 ಚಿನ್ನ

Raghavendra Adiga

 ನಿರ್ಮಲಾ ದೇವಿಗೆ ರಜತ ಪದಕ

ನವದೆಹಲಿ: ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಹಿರಿಯ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತದ ಪಿಂಕಿ ಮತ್ತು ಸರಿಟಾ ಚಿನ್ನದ ಪದಕಗಳನ್ನು ಗೆದ್ದರು. ಫೈನಲ್ ನಲ್ಲಿ ಜಿದ್ದಾಜಿದ್ದಿನ ಪ್ರದರ್ಶನ ನೀಡಿದ ನಿರ್ಮಲಾ ದೇವಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

55 ಕೆಜಿ ವಿಭಾಗದ ಫೈನಲ್‌ನಲ್ಲಿ ಮಂಗೋಲಿಯಾದ ದುಲ್ಗುನ್ ಬೊಲೊರಾಮಾ ಅವರನ್ನು 2–1ರಿಂದ ಸೋಲಿಸಿ ಪಿಂಕಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಇನ್ನು 59 ಕೆಜಿ ವಿಭಾಗದಲ್ಲಿ, ಸರಿತಾ ಮಂಗೋಲಿಯಾದ ಬ್ಯಾಟೆಟ್‌ಸೆಟ್ಗ್ ಅಲ್ಟನ್‌ಸೆಟ್ಸೆಗ್ ವಿರುದ್ಧ 3–2 ಅಂತರದಿಂದ ಗೆದ್ದು ಬಂಗಾರದ ನಗೆ ಬೀರಿದರು. 

ಪಿಂಕಿ ಏಷ್ಯನ್ ಕುಸ್ತಿ ಪಂದ್ಯಾವಳಿ ಇತಿಹಾಸದಲ್ಲಿ ಚಿನ್ನಗೆದ್ದ ಮೂರನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು

58 ಕೆಜಿ ವಿಭಾಗದಲ್ಲಿ 2017 ರಲ್ಲಿ ಬೆಳ್ಳಿ ಗೆದ್ದ ನಂತರ ತನ್ನ ಮೊದಲ ಏಷ್ಯಾ ಸ್ಪರ್ಧೆಯಲ್ಲಿ ಸ್ಪರ್ಧಿಸಿದ ಸರಿತಾ ಭಾರತಕ್ಕೆ ಮತ್ತೊಂದು ಚಿನ್ನ ದಕ್ಕಿಸಿಕೊಟ್ಟರು.

ಇದಕ್ಕೂ ಮೊದಲು, ದಿವ್ಯಾ ಕಕ್ರನ್ ಏಷ್ಯನ್ ಕುಸ್ತಿ ಪಂದ್ಯಾವಳಿಯಲ್ಲಿ ಚಿನ್ನ ಗೆದ್ದ ಎರಡನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.ನವಜೋತ್ ಕೌರ್ 2018 ರಲ್ಲಿ ಕಿರ್ಗಿಸ್ತಾನ್‌ನ ಬಿಷ್ಕೆಕ್‌ನಲ್ಲಿ 65 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಜಯಿಸಿದ್ದಾಗ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.

SCROLL FOR NEXT