ಕ್ರೀಡೆ

ಪಂದ್ಯದ ನಡುವೆ ಜಗಳ, ಕೋಪದಲ್ಲಿ ಎದುರಾಳಿ ತಂಡದ ಆಟಗಾರನ ಮರ್ಮಾಂಗ ಕಚ್ಚಿದ, 10 ಹೊಲಿಗೆ!

Vishwanath S

ಆಟದಲ್ಲಿ ಜಗಳ ಹಾಗೂ ಕೈ ಕೈ ಮಿಲಾಯಿಸುವುದು ಸಾಮಾನ್ಯ. ಆದರೆ ಆಟಗಾರನೊಬ್ಬ ಕೋಪದಲ್ಲಿ ಎದುರಾಳಿ ಆಟಗಾರನ ಮರ್ಮಾಂಗವನ್ನು ಕಚ್ಚಿ ಗಾಸಿಗೊಳಿಸಿದ್ದಾನೆ. 

ಫ್ರಾನ್ಸ್ ನಲ್ಲಿ ಈ ಘಟನೆ ನಡೆದಿದ್ದು ಪಂದ್ಯದ ನಡುವೆ ಜಗಳವಾಗಿದೆ. ಆಗ ಸುಮ್ಮನಾಗಿದ್ದ ಆಟಗಾರ ಪಂದ್ಯ ಮುಗಿದ ನಂತರ ಶಿಶ್ನವನ್ನು ಕಚ್ಚಿದ್ದಾನೆ. ದೇಶೀಯ ಫುಟ್ಬಾಲ್ ಟೂರ್ನಿಯಲ್ಲಿ ಟೆರ್ವಿಲ್ ಹಾಗೂ ಸೋಟ್ರೆಚ್ ತಂಡಗಳ ನಡುವೆ ಫುಟ್ಬಾಲ್ ಪಂದ್ಯ ನಡೆದಿತ್ತು.

ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಪಂದ್ಯ ಮುಗಿದ ಬಳಿಕ ಎರಡು ತಂಡಗ ಕೆಲ ಆಟಗಾರರು ಜಗಳಕ್ಕೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಟೆರ್ವಿಲ್ ತಂಡದ ಆಟಗಾರನೊಬ್ಬ ಜಗಳ ಬಿಡಿಸಲು ಬಂದಿದ್ದಾನೆ ಆತನ ಮರ್ಮಾಂಗವನ್ನು ಸೋಟ್ರೆಚ್ ತಂಡದ ಆಟಗಾರ ಕಚ್ಚಿ ಗಾಯಗೊಳಿಸಿದ್ದಾನೆ. 

ತೀವ್ರವಾಗಿ ಗಾಯಗೊಂಡಿದ್ದ ಜಾಗಕ್ಕೆ ಬರೋಬ್ಬರಿ 10 ಹೊಲಿಗೆ ಹಾಕಲಾಗಿದೆ. ಇನ್ನು ಆಟಗಾರನ ಶಿಶ್ನ ಕಚ್ಚಿದ ಸೋಟ್ರೆಚ್ ತಂಡದ ಆಟಗಾರನಿಗೆ ಫುಟ್ಬಾಲ್ ಫೆಡರೇಷನ್ 5 ವರ್ಷ ನಿಷೇಧ ಹೇರಿದೆ.

SCROLL FOR NEXT