ಸುನಿಲ್ ಛೆಟ್ರಿ ನಂತರ ಯಾರೂ ಇಲ್ಲದೇ ಇರುವುದು ಆತಂಕಕಾರಿ: ಬೈಚುಂಗ್ ಭುಟಿಯಾ 
ಕ್ರೀಡೆ

ಸುನಿಲ್ ಛೆಟ್ರಿ ನಂತರ ಯಾರೂ ಇಲ್ಲದೇ ಇರುವುದು ಆತಂಕಕಾರಿ: ಬೈಚುಂಗ್ ಭುಟಿಯಾ

ಭಾರತೀಯ ಫುಟ್ಬಾಲ್ ನಲ್ಲಿ ಎದುರಾಳಿಗಳಿಗೆ ಆತಂಕ ಉಂಟುಮಾಡಬಲ್ಲ ಜೊತೆಯಾಟಗಾರರು ಇಲ್ಲದಿರುವುದು ನಿರಂತರ ಸಮಸ್ಯೆಯಾಗಿ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಭಾರತೀಯ ಫುಟ್ಬಾಲ್ ನ ಖ್ಯಾತ ಆಟಗಾರ ಬೈಚುಂಗ್ ಭುಟಿಯಾ ಸಹ ಆತಂಕ ವ್ಯಕ್ತಪಡಿಸಿದ್ದಾರೆ. 

ಭಾರತೀಯ ಫುಟ್ಬಾಲ್ ನಲ್ಲಿ ಎದುರಾಳಿಗಳಿಗೆ ಆತಂಕ ಉಂಟುಮಾಡಬಲ್ಲ ಜೊತೆಯಾಟಗಾರರು ಇಲ್ಲದಿರುವುದು ನಿರಂತರ ಸಮಸ್ಯೆಯಾಗಿ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಭಾರತೀಯ ಫುಟ್ಬಾಲ್ ನ ಖ್ಯಾತ ಆಟಗಾರ ಬೈಚುಂಗ್ ಭುಟಿಯಾ ಸಹ ಆತಂಕ ವ್ಯಕ್ತಪಡಿಸಿದ್ದಾರೆ. 

ಐಎಎನ್ಎಸ್ ಜೊತೆ ಮಾತನಾಡಿರುವ ಬೈಚುಂಗ್ ಭುಟಿಯಾ, ಈಗ ಸುನಿಲ್ ಛೆಟ್ರಿ ಭಾರತ ತಂಡದ ಅತ್ಯುತ್ತಮ ಆಟಗಾರನಾಗಿದ್ದಾರೆ, ಆದರೆ ಅವರ ಜೊತೆಯಾಗಿ ನಿಲ್ಲಬಲ್ಲವರು, ಅಥವಾ ಸುನಿಲ್ ಛೆಟ್ರಿ ನಿವೃತ್ತಿ ಘೋಷಿಸಿದ ಬಳಿಕ ಅವರ ಸ್ಥಾನ ತುಂಬುವಂತಹ ಆಟಗಾರರು ಇಲ್ಲದೇ ಇರುವುದು ಆತಂಕದ ವಿಷಯ ಎಂದು ಹೇಳಿದ್ದಾರೆ.

ಭಾರತೀಯ ಕ್ರಿಕೆಟ್ ನ ಮಾದರಿಯಲ್ಲಿ ಫುಟ್ಬಾಲ್ ನಲ್ಲಿಯೂ ಮಾಜಿ ಆಟಗಾರರು ಫುಟ್ಬಾಲ್ ಕ್ರೀಡೆಯನ್ನು ಬಲಿಷ್ಠಗೊಳಿಸಲು ಸಹಕರಿಸಬೇಕೆಂದು ಬೈಚುಂಗ್ ಭುಟಿಯಾ ಅಭಿಪ್ರಾಯಪಟ್ಟಿದ್ದಾರೆ.

ಸುನಿಲ್ ಛೆಟ್ರಿ ಅವರೊಂದಿಗೆ ಜೊತೆಯಾಗಬಲ್ಲ ಜೆಜೆ ಲಾಲ್ಪೆಕ್ಲುವಾ ಹಾಗೂ ಬಲ್ವಂತ್ ಸಿಂಗ್ ಸಹ ಗಾಯಾಳುಗಳಾಗಿದ್ದಾರೆ. ಈ ಕಾರಣದಿಂದ ಆ ಇಬ್ಬರು ಆಟಗಾರರಿಗೂ ಸುನಿಲ್ ಛೆಟ್ರಿಗೆ ಸಾಥ್ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಭುಟಿಯಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್