ಬಾಕ್ಸಿಂಗ್: ಪೂಜಾ ರಾಣಿ, ವಿಕಾಸ್ ಕ್ರಿಶನ್ ಗೆ ಜಯ,ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಮೊದಲ ಭಾರತೀಯ ಜೋಡಿ
ಏಷ್ಯಾ ಚಾಂಪಿಯನ್ ಪೂಜಾ ರಾಣಿ (75 ಕೆಜಿ) ಮತ್ತು ವಿಕಾಸ್ ಕ್ರಿಶನ್ (69 ಕೆಜಿ) ಈ ವರ್ಷದ ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಮೊದಲ ಭಾರತೀಯ ಬಾಕ್ಸರ್ಗಳಾಗಿದ್ದಾರೆ.ಭಾನುವಾರ ಜೋರ್ಡಾನಿನ ಅಮ್ಮನ್ ನಲ್ಲಿ ನಡೆದ ಕ್ರಾರ್ಟರ್ ಫೈನಲ್ಸ್ ನಲ್ಲಿ ಜಯಗಳಿಸಿ ಸೆಮೀಸ್ ಪ್ರವೇಶಿಸುವ ಮೂಲಕ ಒಲಿಂಪಿಕ್ಸ್ಗೆ
ನವದೆಹಲಿ: ಏಷ್ಯಾ ಚಾಂಪಿಯನ್ ಪೂಜಾ ರಾಣಿ (75 ಕೆಜಿ) ಮತ್ತು ವಿಕಾಸ್ ಕ್ರಿಶನ್ (69 ಕೆಜಿ) ಈ ವರ್ಷದ ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಮೊದಲ ಭಾರತೀಯ ಬಾಕ್ಸರ್ಗಳಾಗಿದ್ದಾರೆ.ಭಾನುವಾರ ಜೋರ್ಡಾನಿನ ಅಮ್ಮನ್ ನಲ್ಲಿ ನಡೆದ ಕ್ರಾರ್ಟರ್ ಫೈನಲ್ಸ್ ನಲ್ಲಿ ಜಯಗಳಿಸಿ ಸೆಮೀಸ್ ಪ್ರವೇಶಿಸುವ ಮೂಲಕ ಒಲಿಂಪಿಕ್ಸ್ಗೆ ಅರ್ಹತೆ ಪಡೆದರು.
ನಾಲ್ಕನೇ ಶ್ರೇಯಾಂಕಿತ ರಾಣಿ ಥೈಲ್ಯಾಂಡ್ನ ಪೋರ್ನಿಪಾ ಚುಟೀ ವಿರುದ್ಧ 5-0 ಗೋಲುಗಳಿಂದ ಜಯ ಸಾಧಿಸಿದರೆ, ಕ್ರಿಶನ್ ಮೂರನೇ ಶ್ರೇಯಾಂಕದ ಜಪಾನಿನ ಸೆವೊನ್ರೆಟ್ಸ್ ಒಕಾಜಾವಾ ವಿರುದ್ಧ ಕಠಿಣ ಹೋರಾಟ ನಡೆಸಿ 5-0 ಅಂತರದ ಜಯ ಗಳಿಸಿದ್ದಾರೆ.
ಆದಾಗ್ಯೂ, ಸಚಿನ್ ಕುಮಾರ್ (81 ಕೆಜಿ) ಚೀನಾದ ರಾಷ್ಟ್ರೀಯ ಚಾಂಪಿಯನ್ ಡಾಕ್ಸಿಂಗ್ ಚೆನ್ ಅವರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲು ಕಂಡರು. ಆದರೆ ಸೋತ ಕ್ವಾರ್ಟರ್ಫೈನಲಿಸ್ಟ್ಗಳ ನಡುವೆ ನಡೆಯುವ ಎರಡು ಪಂದ್ಯಗಳ ಬಾಕ್ಸ್-ಆಫ್ ಗೆಲ್ಲಲು ಸಾಧ್ಯವಾದರೆ ಅವರು ಒಲಿಂಪಿಕ್ ಸ್ಥಾನ ಗಟ್ಟಿ ಮಾಡಿಕೊಳ್ಳುವ ಸಾಧ್ಯತೆ ಇದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.