ಕ್ರೀಡೆ

ಕೊರೋನಾವೈರಸ್ ಕಾರಣ ಟೋಕಿಯೊ ಒಲಿಂಪಿಕ್ಸ್  2021ಕ್ಕೆ ಮುಂದೂಡಿಕೆ -ಐಒಸಿ

Nagaraja AB

ಟೋಕಿಯೊ: ಜಾಗತಿಕ ಸಾಂಕ್ರಾಮಿಕ ರೋಗವಾಗಿ ಮಾರ್ಪಟ್ಟಿರುವ ಕೊರೊನಾ ವೈರಸ್ ಭೀತಿ ಹಾಗೂ ಜಾಗತಿಕ ಒತ್ತಡದಿಂದಾಗಿ, ಜಪಾನ್ ಈ ವರ್ಷ 2021 ರಲ್ಲಿ ಟೋಕಿಯೊ ಒಲಿಂಪಿಕ್ಸ್ ನಡೆಸಲು ನಿರ್ಧರಿಸಿದೆ.

 ಟೋಕಿಯೊ ಒಲಿಂಪಿಕ್ಸ್ ಈ ವರ್ಷ ಜುಲೈ 24 ರಿಂದ ಆಗಸ್ಟ್ 9 ರವರೆಗೆ ನಡೆಯಬೇಕಿತ್ತು.ಆದರೆ ಕೊರೊನಾ ವೈರಸ್ ಪ್ರಪಂಚವನ್ನು ವ್ಯಾಪಿಸಿರುವ ಭೀತಿಯನ್ನು ಗಮನದಲ್ಲಿಟ್ಟುಕೊಂಡು, ಐಒಸಿ ಅಧ್ಯಕ್ಷ ಥಾಮಸ್ ಬಾಚ್ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಚರ್ಚೆ ನಡೆಸಿದ ಬಳಿಕ ಒಲಿಂಪಿಕ್ಸ್ ಕ್ರೀಡಾಕೂಟ ಮುಂದೂಡುವ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಆಧಾರದ ಮೇಲೆ  ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಅಥ್ಲಿಟಿಕ್ ಮತ್ತಿತರರ  ಆರೋಗ್ಯ ಹಾಗೂ ಅಂತಾರಾಷ್ಟ್ರೀಯ ಸಮುದಾಯದ ಸುರಕ್ಷತೆ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

SCROLL FOR NEXT