ಕ್ರೀಡೆ

ಕೇಂದ್ರ ಸರ್ಕಾರದಿಂದ 500 ಖಾಸಗಿ ಕ್ರೀಡಾ ಅಕಾಡೆಮಿಗಳಿಗೆ ಪ್ರೋತ್ಸಾಹ ಧನ

Nagaraja AB

ನವದೆಹಲಿ: ಕೇಂದ್ರ ಕ್ರೀಡಾ ಸಚಿವಾಲಯ ಖೇಲೋ ಇಂಡಿಯಾ ಯೋಜನೆ ಅಡಿಯಲ್ಲಿ ಮೊದಲ ಬಾರಿಗೆ 2020-21ನೇ ಹಣಕಾಸು ವರ್ಷದಿಂದ ಮುಂದಿನ ನಾಲ್ಕು ವರ್ಷಗಳ ಅವಧಿಗೆ 500 ಖಾಸಗಿ ಕ್ರೀಡಾ ಅಕಾಡೆಮಿಗಳಿಗೆ ಆರ್ಥಿಕ ನೆರವು ನೀಡಲು ಹೊಸ ಪ್ರೋತ್ಸಾಹಕರ ಯೋಜನೆಯನ್ನು  ಪರಿಚಯಿಸಿದೆ. 

ಈ ಯೋಜನೆಯಡಿ  ಅಕಾಡೆಮಿಗಳಲ್ಲಿ ತರಬೇತಿ ಪಡೆದ ಆಟಗಾರರ ಸಾಧನೆಯ ಗುಣಮಟ್ಟ,  ಲಭ್ಯವಿರುವ ಕೋಚ್ ಗಳ ಗುಣಮಟ್ಟ, ಯಾವ ಕ್ಷೇತ್ರದಲ್ಲಿ ಗುಣಮಟ್ಟವಿದೆ ಮತ್ತು ಲಭ್ಯವಿರುವ ಮೂಲಸೌಕರ್ಯ ಹಾಗೂ ಕ್ರೀಡಾ ವಿಜ್ಞಾನ ಸೌಕರ್ಯ ಮತ್ತು ಸಿಬ್ಬಂದಿ ಆಧರಿಸಿ ನಾನಾ ವಿಭಾಗಗಳನ್ನಾಗಿ ಶ್ರೇಣೀಕರಿಸಲಾಗುವುದು. 

ಅದರಲ್ಲಿ 2028ರ ಒಲಿಂಪಿಕ್ಸ್ ಗೆ ಆಯ್ಕೆ ಮಾಡಿರುವ 14 ಕ್ರೀಡಾ ವಿಭಾಗಗಳಲ್ಲಿ ಆಯ್ಕೆಯಾಗಿರುವ ಕ್ರೀಡೆಗಳ ಅಕಾಡೆಮಿಗಳು ಮೊದಲ ಹಂತದಲ್ಲಿ ಆರ್ಥಿಕ ನೆರವಿಗೆ ಅರ್ಹವಾಗಿರುತ್ತವೆ.

SCROLL FOR NEXT