ಕ್ರೀಡೆ

ಪುರುಷರ ಸಿಂಗಲ್ಸ್ ಯುಸ್ ಓಪನ್ ಟೆನಿಸ್ ಗ್ರಾಂಡ್ ಸ್ಲಾಮ್ ಕಿರೀಟ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಪಾಲು 

Sumana Upadhyaya

ನ್ಯೂಯಾರ್ಕ್: ಇಲ್ಲಿನ ಅರ್ತುರ್ ಅಸೆ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ಪುರುಷರ ಸಿಂಗಲ್ಸ್ ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಆಸ್ಟ್ರಿಯಾದ ಆಟಗಾರ ಡೊಮಿನಿಕ್ ಥೀಮ್ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಸೋಲಿಸಿ ಮೊದಲ ಬಾರಿಗೆ ಪ್ರಶಸ್ತಿ ಗೆದ್ದು ಬೀಗಿದ್ದಾರೆ.

27 ವರ್ಷದ ಡೊಮಿನಿಕ್ ಥೀಮ್ ಅವರು 23 ವರ್ಷದ ಅಲೆಕ್ಸಾಂಡರ್ ಅವರನ್ನು 2-6, 4-6, 6-4, 6-3, 7-6 ಸೆಟ್ ಗಳಿಂದ ಸತತ ನಾಲ್ಕು ಗಂಟೆಗಳಿಗೂ ಅಧಿಕ ಕಾಲ ಆಡಿ ತಮ್ಮ ಮೊದಲ ಚಾಂಪಿಯನ್ ಷಿಪ್ ನ್ನು ಗೆದ್ದು ಬೀಗಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಕ್ರೀಡಾಂಗಣಕ್ಕೆ ಟೆನಿಸ್ ಅಭಿಮಾನಿಗಳಿಗೆ ಕ್ರೀಡಾಂಗಣಕ್ಕೆ ಪ್ರವೇಶ ಇರಲಿಲ್ಲ. 

ಇನ್ನು ಮೊನ್ನೆ, ಯುಎಸ್ ಮುಕ್ತ ಟೆನಿಸ್ ನ ಮಹಿಳೆಯರ ಸಿಂಗಲ್ಸ್ ಅಂತಿಮ ಪಂದ್ಯದಲ್ಲಿ ಬೆಲಾರಸ್ ನ ವಿಕ್ಟೋರಿಯಾ ಅಜರೆಂಕಾ ಅವರನ್ನು ಸೋಲಿಸುವ ಮೂಲಕ ಜಪಾನ್ ನ ನವೋಮಿ ಒಸಾಕಾ ಸತತ ಮೂರನೇ ಬಾರಿಗೆ ಗ್ರಾಂಡ್ ಸ್ಲಾಮ್ ಕಿರೀಟವನ್ನು ಗೆದ್ದಿದ್ದರು.

SCROLL FOR NEXT