ಟೋಕಿಯೊ: ಬಹು ನಿರೀಕ್ಷಿತ ಭಾರತದ ಪುರುಷರ ಹಾಕಿ ಪಂದ್ಯ ನಡೆಯುತ್ತಿದ್ದು ಬೆಲ್ಜಿಯಂ ವಿರುದ್ಧದ ಪಂದ್ಯದಲ್ಲಿ 2-1ರ ಮುನ್ನಡೆ ಸಾಧಿಸಿದೆ.
ಮೊದಲಾರ್ಧದ ಕೊನೆಯಲ್ಲಿ ಭಾರತ ಮತ್ತು ಬೆಲ್ಜಿಯಂ ಎರಡೂ ತಂಡಗಳು 2-2 ಸಮಬಲ ಸಾಧಿಸಿದ್ದವು. ಇಂದು ಸೆಮಿ ಫೈನಲ್ ಪಂದ್ಯವಾಗಿದ್ದು, ಹೈ ವೋಲ್ಟೇಜ್ ಪಂದ್ಯವಾಗಿದೆ.ಪಂದ್ಯದಲ್ಲಿ ಆಡುತ್ತಿರುವ ಆಟಗಾರರ ಕುಟುಂಬಸ್ಥರು ಪಂದ್ಯವನ್ನು ಮನೆಗಳಲ್ಲಿ ಟಿ ವಿ ಮುಂದೆ ಕುಳಿತು ವೀಕ್ಷಿಸುತ್ತಿದ್ದಾರೆ.
ಪಂದ್ಯ ವೀಕ್ಷಿಸುತ್ತಿರುವ ಪ್ರಧಾನಿ ಮೋದಿ: ಇನ್ನು ಪ್ರಧಾನಿ ಮೋದಿಯವರು ಸಹ ದೆಹಲಿಯ ತಮ್ಮ ನಿವಾಸದಲ್ಲಿ ಪಂದ್ಯವನ್ನು ತದೇಕಚಿತ್ತದಿಂದ ವೀಕ್ಷಿಸುತ್ತಿದ್ದಾರೆ. ತಮ್ಮೆಲ್ಲಾ ಕೆಲಸಗಳನ್ನು ಬದಿಗೊತ್ತಿ ಏನಾಗುತ್ತದೆ ಎಂದು ಟಿ ವಿ ಮುಂದೆ ಕುತೂಹಲದಿಂದ ನೋಡುತ್ತಿದ್ದಾರೆ. ನಮ್ಮ ಭಾರತದ ಪುರುಷರ ಹಾಕಿ ತಂಡ ಮತ್ತು ಅವರ ಕೌಶಲ್ಯಕ್ಕೆ ಮೆಚ್ಚುಗೆಯಾಗುತ್ತಿದೆ, ಬೆಸ್ಟ್ ಆಫ್ ಲಕ್ ಎಂದು ಹಾರೈಸಿದ್ದಾರೆ.
ಮೂರನೇ ಕ್ವಾರ್ಟರ್ ಮುಗಿಯುವ ಹೊತ್ತಿಗೆ ಎರಡೂ ತಂಡಗಳು ಸಮಬಲ ಸಾಧಿಸಿವೆ.