ಕ್ರೀಡೆ

ವಿಂಬಲ್ಡನ್: ಫೈನಲ್ ನಲ್ಲಿ ಗೆದ್ದು ದಾಖಲೆಯ 20ನೇ ಗ್ರಾಂಡ್ ಸ್ಲಾಮ್ ಮುಡಿಗೇರಿಸಿಕೊಂಡ ಜಾಕೋವಿಚ್

Srinivasamurthy VN

ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ವಿಂಬಲ್ಡನ್ ಟೆನ್ನಿಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನಿರೀಕ್ಷೆಯಂತೆಯೇ ಸರ್ಬಿಯಾದ ನುವಾಕ್ ಜಾಕೋವಿಚ್ ಜಯ ಗಳಿಸಿ ತಮ್ಮ 6ನೇ ವಿಂಬಲ್ಡನ್ ಟೂರ್ನಿ ಮತ್ತು 20ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಇಂದು ಫೈನಲ್ ಪಂದ್ಯದಲ್ಲಿ ಇಟಲಿಯ ಮ್ಯಾಟಿಯೊ ಬೆರೆಟ್ಟಿನಿ ಅವರನ್ನು ಜಾಕೋವಿಚ್ 6-7, 6-4, 6-4, 6-3 ನೇರ ಸೆಟ್ ಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿದರು. ಇಡೀ ಪಂದ್ಯದಲ್ಲಿ ಮೊದಲ ಸೆಟ್ ರೋಚಕತೆಯಿಂದ ಕೂಡಿತ್ತು. ಆರಂಭಿಕ ಮುನ್ನಡೆ ಸಾಧಿಸಿದ್ದ ಚಾಕೋವಿಚ್ ಗೆ ಭಾರಿ ಹೋರಾಟ  ನೀಡಿದ್ದರು. ನೋಡನೋಡುತ್ತಲೇ ಮ್ಯಾಟಿಯೊ ಬೆರೆಟ್ಟಿನಿ ಮುನ್ನಡೆ ಸಾಧಿಸಿದ್ದು ಮಾತ್ರವಲ್ಲದೇ 6-7 ಅಂತರದಲ್ಲಿ ವಿರೋಚಿತ ಸೆಟ್ ಅನ್ನು ತಮ್ಮದಾಗಿಸಿಕೊಂಡರು. ಮೊದಲ ಸೆಟ್ ಹಿನ್ನಡೆ ಬಳಿಕ ತತ್ ಕ್ಷಣವೇ ಪುಟಿದೆದ್ದ ಜಾಕೋವಿಚ್ 2ನೇ ಸೆಟ್ ಅನ್ನು 6-4 ಅಂತರದಲ್ಲಿ ತಮ್ಮದಾಗಿಸಿಕೊಂಡರು.

ಬಳಿಕ ಮೂರನೇ ಸೆಟ್ ಅಲ್ಲೂ ಪಾರಮ್ಯ ಮೆರೆದೆ ಜಾಕೋವಿಚ್ 6-4 ಅಂತರದಲ್ಲಿ ಸೆಟ್ ತಮ್ಮದಾಗಿಸಿಕೊಂಡರು. 2 ಮತ್ತು 3ನೇ ಸೆಟ್ ಗಳ ಹಿನ್ನಡೆಯಿಂದಾಗಿ ಕೊಂಚ ವಿಚಲಿತರಾದಂತೆ ಕಂಡುಬಂದ ಬೆರೆಟ್ಟಿನಿ ಅಂತಿಮ ಸೆಟ್ ಅನ್ನೂ ಕೂಡ 6-3ರಲ್ಲಿ ಕೈ ಚೆಲ್ಲಿ ವಿಂಬಲ್ಡನ್ ಪ್ರಶಸ್ತಿ ಗೆಲ್ಲವು ಅವಕಾಶವನ್ನು  ಕಳೆದುಕೊಂಡರು. ಆದರೆ ಮೊದಲ ಸೆಟ್ ನ ಹಿನ್ನಡೆ ಹೊರತಾಗಿಯೂ ಪುಟಿದೆದ್ದ ಜಾಕೋವಿಚ್ ಸತತ ಮೂರೂ ಸೆಟ್ ಗಳನ್ನೂ ಗೆದ್ದು ತಮ್ಮ ವೃತ್ತಿ ಜೀವನದ ಆರನೇ ವಿಂಬಲ್ಡನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಅಲ್ಲದೆ ಜಾಕೋವಿಚ್ ಗೆ ಇದು 20ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿಯಾಗಿದ್ದು, ಆ ಮೂಲಕ 20 ಗ್ರಾಂಡ್ ಸ್ಲಾಮ್ ಗೆದ್ದ ದಾಖಲೆಯನ್ನು ಜಾಕೋವಿಚ್ ಬರೆದಿದ್ದಾರೆ.

SCROLL FOR NEXT