ಸಜನ್ ಪ್ರಕಾಶ್ 
ಕ್ರೀಡೆ

‘ಎ’ ಸ್ಟ್ಯಾಂಡರ್ಡ್ ಒಲಿಂಪಿಕ್ ಕೋಟಾ ಗಳಿಸಿದ ಮೊದಲ ಭಾರತೀಯ ಈಜುಗಾರ ಸಜನ್ ಪ್ರಕಾಶ್

ಭಾರತದ ಈಜುಪಟು ಸಜನ್ ಪ್ರಕಾಶ್ ‘ಎ’ ಸ್ಟ್ಯಾಂಡರ್ಡ್ ನೊಂದಿಗೆ ಟೋಕಿಯೊ ಒಲಿಂಪಿಕ್ಸ್‌ಗೆ ಪ್ರವೇಶಿಸಿದ ಮೊದಲ ಭಾರತೀಯ ಎಂದು ಹ್ಗ್ಗಳಿಕೆಗೆ ಪಾತ್ರವಾದರು.

ಹೈದರಾಬಾದ್: ಭಾರತದ ಈಜುಪಟು ಸಜನ್ ಪ್ರಕಾಶ್ ‘ಎ’ ಸ್ಟ್ಯಾಂಡರ್ಡ್ ನೊಂದಿಗೆ ಟೋಕಿಯೊ ಒಲಿಂಪಿಕ್ಸ್‌ಗೆ ಪ್ರವೇಶಿಸಿದ ಮೊದಲ ಭಾರತೀಯ ಎಂದು ಹ್ಗ್ಗಳಿಕೆಗೆ ಪಾತ್ರವಾದರು.

ಇಟಲಿಯ ರೋಮ್‌ನ ಸೆಟೆಕೊಲ್ಲಿಯಲ್ಲಿ ಲೇನ್ 3 ನಲ್ಲಿಈಜುತ್ತಿದ್ದ ಕೇರಳದ 27 ವರ್ಷದ ಯುವಕ ಸಜನ್  1: 56.48 ನಿಮಿಷಕ್ಕೆ ಅಸಾಧಾರಣವಾದ ‘ಎ’ಕಟ್ ಅನ್ನು ಸಾಧಿಸಿದ್ದರು. ಕಳೆದ ವಾರ ಸೆರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ‘ಎ’ ಕಟ್ ಗಾಗಿ ಅತ್ಯಂತ ಸನಿಹಕ್ಕೆ ಬಂದಿದ್ದು ಇದು ಅವರ ಎರಡನೇ ಬಾರಿಯ ಸಾಧನೆಯಾಗಿದೆ. ಅವರು 1: 56.48 ನಿಮಿಷಕ್ಕೆ 200 ಮೀಟರ್ ಬಟರ್ ಫ್ಲೈ  ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ.

ಪಶ್ಚಿಮ ಘಟ್ಟದ ​​ಅತಿ ಎತ್ತರದ ಶಿಖರಗಳಿರುವ ಇಡುಕ್ಕಿ ಜಿಲ್ಲೆಯ ಸಜನ್  ತನ್ನ ಸ್ನೇಹಿತ ಪ್ರದೀಪ್ ಕುಮಾರ್‌ ಜತೆ ತೆರಳುವುದಕ್ಕೆ ಮುನ್ನ ನಯೆವೆಲಿ (ತಮಿಳುನಾಡು) ನಲ್ಲಿ ತರಬೇತುದಾರ ಸಾಜು ಸೆಬಾಸ್ಟಿಯನ್ ನೇತೃತ್ವದಲ್ಲಿ ಈಜು ತರಬೇತಿ ಪಡೆದಿದ್ದರು. ಅವರು ಥೈಲ್ಯಾಂಡ್ ನಲ್ಲಿಫಿನಾ ವಿದ್ಯಾರ್ಥಿವೇತನದಲ್ಲಿ ತರಬೇತಿ ಪಡೆಯುತ್ತಿದ್ದರು, ಮತ್ತು ರಿಯೊ ಗೇಮ್ಸ್ ನಂತರ  ಅತ್ಯಂತ ಸ್ಥಿರವಾದ ಪ್ರದರ್ಶನ ನೀಡುತ್ತಾ ಸಾಗಿದ್ದರು. ಸಾಂಕ್ರಾಮಿಕ ರೋಗವು ಅವರನ್ನು  ದುಬೈಗೆ ಹೋಗುವಂತೆ ಮಾಡಿತ್ತು. ಅಲ್ಲಿ ಅವರು ಒಳಾಂಗಣ ಈಜುಕೊಳದಲ್ಲಿ ತರಬೇತಿ ಮುಂದುವರಿಸಿದ್ದರು.

ಕೇಂದ್ರ ಸಚಿವರ ಅಭಿನಂದನೆ

ರೋಮ್‌ನ ಸೆಟ್ಟೆ ಕೊಲ್ಲಿ ಟ್ರೋಫಿಯಲ್ಲಿ ಪುರುಷರ 200 ಮೀಟರ್ ಬಟರ್ ಫ್ಲೈ ವಿಭಾಗದಲ್ಲಿ  1:56:38 ಸಮಯದಲ್ಲಿ ಗುರಿ ತಲುಪಿ  ಟೋಕಿಯೊ 2020 ಗೆ ಅರ್ಹತೆ ಪಡೆದ ಮೊದಲ ಭಾರತೀಯ ಈಜುಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸಜನ್ ಪ್ರಕಾಶ್ ಅವರಿಗೆ ನಾನು ಅಭಿನಂದಿಸುತ್ತೇನೆ.  ಭಾರತವನ್ನು ಹೆಮ್ಮೆ ಪಡುವಂತೆ ನಮ್ಮ ಕ್ರೀಡಾಪಟು ಬದ್ದತೆ ತೋರಿದ್ದಾರೆ. ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT