ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಒಲಿಂಪಿಕ್ ಚಿನ್ನದ ಪದಕ ವಿಜೇತ, ಮಾಜಿ ಹಾಕಿ ಆಟಗಾರ ರವೀಂದರ್ ಪಾಲ್ ಸಿಂಗ್ ಕೋವಿಡ್'ಗೆ ಬಲಿ

ಒಲಿಂಪಿಕ್ ಚಿನ್ನದ ಪದಕ ವಿಜೇತ, ಮಾಜಿ ಹಾಕಿ ಆಟಗಾರ ರವೀಂದರ್ ಪಾಲ್ ಸಿಂಗ್ (65) ಅವರು ಮಹಾಮಾರಿ ಕೊರೋನಾ ಸೋಂಕಿನಿಂದ ನಿಧನ ಹೊಂದಿದ್ದಾರೆಂದು ಶನಿವಾರ ತಿಳಿದುಬಂದಿದೆ.

ರವೀಂದರ್ ಪಾಲ್ ಸಿಂಗ್
Manjula VN
Updated On : 8 May 2021, 1:20 pm

ನವದೆಹಲಿ: ಒಲಿಂಪಿಕ್ ಚಿನ್ನದ ಪದಕ ವಿಜೇತ, ಮಾಜಿ ಹಾಕಿ ಆಟಗಾರ ರವೀಂದರ್ ಪಾಲ್ ಸಿಂಗ್ (65) ಅವರು ಮಹಾಮಾರಿ ಕೊರೋನಾ ಸೋಂಕಿನಿಂದ ನಿಧನ ಹೊಂದಿದ್ದಾರೆಂದು ಶನಿವಾರ ತಿಳಿದುಬಂದಿದೆ. 

ಕೊರೋನಾ ಸೋಂಕಿಗೊಳಗಾಗಿದ್ದ ಸಿಂಗ್ ಅವರು ಏಪ್ರಿಲ್ 24 ಹರಂದು ವಿವೇಕಾನಂದ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಸೋಂಕಿನಿಂದ ಗುಣಮುಖರಾಗಿದ್ದು, ಕಳೆದ ಗುರುವಾರ ನಾನ್ ಕೋವಿಡ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿತ್ತು ಎಂದು ರವೀಂದರ್ ಕುಟುಂಬದ ಮೂಲಗಳು ತಿಳಿಸಿವೆ.

ಆದರೆ ಶುಕ್ರವಾರ ಅವರ ಸ್ಥಿತಿ ಇದ್ದಕ್ಕಿದ್ದಂತೆ ಹದಗೆಟ್ಟಿದ್ದು ಕೂಡಲೇ ಅವರಿಗೆ ವೆಂಟಿಲೇಟರ್‌ ಅಳವಡಿಸಲಾಯಿತು ಎಂದು ವರದಿಗಳು ತಿಳಿಸಿವೆ. 

Advertisement

Advertisement

1984 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಆಡಿದ್ದ ಸಿಂಗ್ ಅವಿವಾಹಿತರಾಗಿದ್ದು, ಸೋದರ ಸೊಸೆ, ಪ್ರಜ್ಞಾ ಯಾದವರನ್ನು ಅಗಲಿದ್ದಾರೆ.

ಸಿಂಗ್ ಅವರು 1979 ರ ಜೂನಿಯರ್ ವಿಶ್ವಕಪ್‌ನಲ್ಲಿ ಆಡಿದ್ದರು ಹಾಗೂ ಹಾಕಿಯಿಂದ ನಿವೃತ್ತಿಯಾದ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೌಕರಿಯಿಂದಲೂ ಸ್ವಯಂಪ್ರೇರಿತರಾಗಿ ನಿವೃತ್ತರಾದರು. ಸೀತಾಪುರದಲ್ಲಿ ಜನಿಸಿದ ಸಿಂಗ್ 1979 ರಿಂದ 1984 ರವರೆಗೆ ಎರಡು ಒಲಿಂಪಿಕ್ಸ್ ನಲ್ಲಿ ಆಡಿದ್ದರು.

ಕರಾಚಿಯಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ (1980, 1983) ಹಾಂಕಾಂಗ್‌ನಲ್ಲಿ ನಡೆದ ಸಿಲ್ವರ್ ಜುಬಿಲಿ 10 ರಾಷ್ಟ್ರಗಳ ಕಪ್, 1982 ರಲ್ಲಿ ಮುಂಬೈನಲ್ಲಿ ನಡೆದ ವಿಶ್ವಕಪ್ ಹಾಗೂ ಕರಾಚಿಯಲ್ಲಿ ನಡೆದ ಏಷ್ಯಾಕಪ್ ಸೇರಿದಂತೆ ಇತರ ಪಂದ್ಯಾವಳಿಗಳಲ್ಲಿ ಸಿಂಗ್ ಭಾರತವನ್ನು ಪ್ರತಿನಿಧಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement