ವಿ ಚಂದ್ರಶೇಖರ್ 
ಕ್ರೀಡೆ

ಅರ್ಜುನ ಪ್ರಶಸ್ತಿ ವಿಜೇತ ಟೇಬಲ್ ಟೆನ್ನಿಸ್ ತಾರೆ ವಿ.ಚಂದ್ರಶೇಖರ್ ಕೊರೋನಾ ಸೋಂಕಿನಿಂದ ನಿಧನ

ಮೂರು ಬಾರಿ ರಾಷ್ಟ್ರೀಯ ಟೇಬಲ್ ಟೆನ್ನಿಸ್ ಚಾಂಪಿಯನ್, ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿದ್ದ ವಿ.ಚಂದ್ರಶೇಖರ್ ಚೆನ್ನೈನಲ್ಲಿ ಕೊರೋನಾ ಸೋಂಕಿನಿಂದ ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು.

ಚೆನ್ನೈ: ಮೂರು ಬಾರಿ ರಾಷ್ಟ್ರೀಯ ಟೇಬಲ್ ಟೆನ್ನಿಸ್ ಚಾಂಪಿಯನ್, ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿದ್ದ ವಿ.ಚಂದ್ರಶೇಖರ್ ಚೆನ್ನೈನಲ್ಲಿ ಕೊರೋನಾ ಸೋಂಕಿನಿಂದ ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು. ಮೃತರಿಗೆ ಪತ್ನಿ ಮತ್ತು ಮಗ ಇದ್ದಾರೆ.

ಟಿಟಿ ನಲ್ಲಿ 'ಚಂದ್ರ' ಎಂದು ಜನಪ್ರಿಯವಾಗಿ ಕರೆಯಲ್ಪಟ್ಟ ಚಂದ್ರಶೇಖರ್ ಕೊರೋನಾಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಅವರು ತಮಿಳಿಗ  ಟೇಬಲ್ ಟೆನ್ನಿಸ್ ಸಂಘದ ಅಧ್ಯಕ್ಷರಾಗಿದ್ದರು. ಅವರು ಎಸ್‌ಡಿಎಟಿ-ಮೆಡಿಮಿಕ್ಸ್ ಟಿಟಿಯ ನಿರ್ದೇಶಕರು ಮತ್ತು ಮುಖ್ಯ ತರಬೇತುದಾರರಾಗಿದ್ದರು.

1982 ರಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸೆಮಿಫೈನಲ್ ತಲುಪಿದ ಚಂದ್ರಶೇಖರ್ ತರಬೇತುದಾರರಾಗಿ ಸಹ ಯಶಸ್ವಿಯಾಗಿದ್ದರು.

1984 ರಲ್ಲಿ ಅವರು ಬಲ ಮೊಣಕಾಲಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಬಳಿಕ ಅವರ ಕ್ರೀಡಾ ಬದುಕು ಮೊಟಕಾಗಿತ್ತು. ಆದಾಗ್ಯೂ, ಅವರು  ಯಶಸ್ವಿ ತರಬೇತುದಾರನಾಗಿ ಹೊರಹೊಮ್ಮಿದ್ದರು. ಟೇಬಲ್ ಟೆನ್ನಿಸ್ ಜಗತ್ತು ಅಗಲಿದ ಕ್ರೀಡಾ ತಾರೆಗೆ ಸಂತಾಪ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?