ಕ್ರೀಡೆ

'ಮೋದಿ ಸರ್ವಾಧಿಕಾರಿಯಲ್ಲ' ಎಂಬ ಅಮಿತ್ ಶಾ ಹೇಳಿಕೆ ಒಂದು ಜೋಕ್: ಟೆನಿಸ್ ದಂತಕಥೆ ಮಾರ್ಟಿನಾ

Lingaraj Badiger

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 'ಸರ್ವಾಧಿಕಾರಿಯಲ್ಲ', ಅವರು ದೇಶಕಂಡ ಅತ್ಯುತ್ತಮ "ಪ್ರಜಾಪ್ರಭುತ್ವ ನಾಯಕ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಹಾಡಿ ಹೊಗಳುವುದು ಒಂದು ಜೋಕ್ ಎಂದು ಟೆನಿಸ್ ದಂತಕಥೆ ಮಾರ್ಟಿನಾ ನವ್ರಾಟಿಲೋವಾ ಅವರು ವ್ಯಂಗ್ಯವಾಡಿದ್ದಾರೆ.

ಮೋದಿ ಸರ್ಕಾರ ಪ್ರಜಾಪ್ರಭುತ್ವದ ರೀತಿಯಲ್ಲಿ ಕಾರ್ಯನಿರ್ವಹಿಸಲಿಲ್ಲ ಎಂದು ಅವರ ವಿರೋಧಿಗಳು ಸಹ ಒಪ್ಪಿಕೊಳ್ಳುತ್ತಾರೆ ಎಂದು ಅಮಿತ್ ಶಾ ಅವರು ಭಾನುವಾರ ಹೇಳಿದ್ದರು. ಕೇಂದ್ರ ಗೃಹ ಸಚಿವ ಈ ಹೇಳಿಕೆಯನ್ನು ಒಪ್ಪಿಕೊಳ್ಳದ ಮಾರ್ಟಿನಾ ನವ್ರಾಟಿಲೋವಾ ಅವರು, "ಇದು ನನ್ನ ಮುಂದಿನ ಜೋಕ್..." ಎಂದು ಟ್ವೀಟ್ ಮಾಡಿದ್ದಾರೆ.

ಸಂಸದ್ ಟಿವಿಗೆ ನೀಡಿದ ಸಂದರ್ಶನದಲ್ಲಿ, ಪ್ರಧಾನಿ ಮೋದಿ ಒಬ್ಬ ಸರ್ವಾಧಿಕಾರಿ ಎಂಬ ಆರೋಪಗಳನ್ನು ತಳ್ಳಿಹಾಕಿದ ಅಮಿತ್ ಶಾ, ಪ್ರಧಾನಿಯಂತಹ "ತಾಳ್ಮೆಯ ಕೇಳುಗರನ್ನು" ತಾವು ನೋಡಿಲ್ಲ ಎಂದು ಹೇಳಿದರು. ಅವರು ತಮ್ಮ ಹುದ್ದೆ ಅಥವಾ ಸ್ಥಾನವನ್ನು ಲೆಕ್ಕಿಸದೆ ಯಾರೇ ಸಲಹೆ ನೀಡಿದರೂ ಎಲ್ಲಾ ಯೋಗ್ಯ ಸಲಹೆಗಳನ್ನು ಸ್ವೀಕರಿಸುತ್ತಾರೆ ಎಂದಿದ್ದಾರೆ.

ಮೋದಿ 'ಸರ್ವಾಧಿಕಾರಿಯಲ್ಲ', ಅವರು ದೇಶಕಂಡ ಅತ್ಯುತ್ತಮ "ಪ್ರಜಾಪ್ರಭುತ್ವ ನಾಯಕ" ಎಂಬ ಅಮಿತ್ ಶಾ ಹೇಳಿಕೆ ಕುರಿತ ಸುದ್ದಿಯ ತುಣುಕನ್ನು ಟ್ವೀಟ್ ಮಾಡಿರುವ ಮಾರ್ಟಿನಾ, ಇದು ನನ್ನ ಮುಂದಿನ ಜೋಕ್ ಎಂದು ಬರೆದಿದ್ದಾರೆ.

SCROLL FOR NEXT