ಪ್ರಮೋದ್ ಭಗತ್, ಮನೋಜ್ ಸರ್ಕಾರ್ 
ಕ್ರೀಡೆ

ಟೋಕಿಯೊ ಪ್ಯಾರಾಲಿಂಪಿಕ್ಸ್: ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಪ್ರಮೋದ್ ಭಗತ್ ಗೆ ಚಿನ್ನ, ಮನೋಜ್ ಸರ್ಕಾರ್ ಗೆ ಕಂಚು

ಇಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರಿದಿದೆ. ಪ್ರಮೋದ್ ಭಗತ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್ ಎಲ್ 3 ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 

ಟೋಕಿಯೊ: ಇಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರಿದಿದೆ. ಪ್ರಮೋದ್ ಭಗತ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್ ಎಲ್ 3 ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 

ವಿಶ್ವದ ನಂಬರ್ 1 ಪ್ರಮೋದ್ ಭಗತ್ 21-14, 21-17 ಸೆಟ್ ಗಳಿಂದ ಗ್ರೇಟ್ ಬ್ರಿಟನ್ ನ ಡೇನಿಯಲ್ ಬೆತೆಲ್ಲ್ ಅವರನ್ನು ಸೋಲಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಈ ಮೂಲಕ ಇಂದಿನ ಪ್ಯಾರಾಲಿಂಪಿಕ್ಸ್ ಪಂದ್ಯದಲ್ಲಿ ಭಾರತ ಎರಡನೇ ಪದಕ ಗೆದ್ದುಕೊಂಡಿತು. 

ಇನ್ನು ಮನೋಜ್ ಸರ್ಕಾರ್ ಕೂಡ ಅದೇ ವಿಭಾಗದಲ್ಲಿ ಜಪಾನ್‌ನ ಡೈಸುಕೆ ಫುಜಿಹರಾ ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಮನೋಜ್ ಅವರು ಪ್ಯಾರಾಲಿಂಪಿಕ್ ನಲ್ಲಿ ಭಾರತಕ್ಕೆ 17ನೇ ಪದಕ ತಂದುಕೊಟ್ಟಿದ್ದಾರೆ. ಇಬ್ಬರು ಆಟಗಾರರಿಗೂ ದೇಶದ ಮೂಲೆ ಮೂಲೆಗಳಿಂದ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

India-Nepal ಸಂಬಂಧ ಬಲವರ್ಧನೆಗೆ ಮಹತ್ವದ ಹೆಜ್ಜೆ; ಪ್ರಧಾನಿ ಮೋದಿ ಜೊತೆ ಬಾಲೆನ್ ಶಾ ದ್ವಿಪಕ್ಷೀಯ ಮಾತುಕತೆ; ಪ್ರವಾಹ ಪರಿಹಾರ ಪ್ಯಾಕೇಜ್, ರೈಲು ಸಂಪರ್ಕ ವಿಸ್ತರಣೆಗೆ ಒತ್ತು..!

90ಕ್ಕೂ ಹೆಚ್ಚು ಗುಣಮಟ್ಟದ ಪರೀಕ್ಷೆ ನಡೆಸುತ್ತೇವೆ; ‘Bromate ನಿಗದಿತ ಮಿತಿಯಲ್ಲಿದೆ, ನಮ್ಮ ಕುಡಿಯುವ ನೀರು ಸುರಕ್ಷಿತ’: FSSAI ಕ್ರಮದ ಬೆನ್ನಲ್ಲೇ Bisleri ಸ್ಪಷ್ಟನೆ..!

ಫ್ರೀಡಂ ಪಾರ್ಕ್‌ನಲ್ಲಿ 7ನೇ ದಿನಕ್ಕೆ ಕಾಲಿಟ್ಟ ಧರಣಿಯಿಂದ ಬಿಗಡಾಯಿಸಿದ "ಆಶಾ" ಆರೋಗ್ಯ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ 17 ಕಾರ್ಯಕರ್ತೆಯರು

Gold Price: ಚಿನ್ನ, ಬೆಳ್ಳಿ ಬೆಲೆ ದಿಢೀರ್ ಭಾರಿ ಏರಿಕೆ; ಬೆಲೆ ವಿವರಗಳು ಇಂತಿವೆ...

ಬದಲಾಗುತ್ತಿರುವ ಭಾರತದ ಆರ್ಥಿಕ ಪಯಣಕ್ಕೆ ಹೊಸ ಕನ್ನಡಿ; ವಾಣಿಜ್ಯ ಪತ್ರಿಕೋದ್ಯಮಕ್ಕೆ The New Indian Express ಹೊಸ ಕೊಡುಗೆ, 'The Financial Standard' ಲೋಕಾರ್ಪಣೆ