ಮನೀಶ್ ನರ್ವಾಲ್-ಸಿಂಗರಾಜ್ (ಸಾಯಿ ಮೀಡಿಯಾ ಚಿತ್ರ) 
ಕ್ರೀಡೆ

ಟೋಕಿಯೊ ಪ್ಯಾರಾಲಿಂಪಿಕ್ಸ್: ಚಿನ್ನ, ಬೆಳ್ಳಿ ಪದಕ ಗೆದ್ದ  ಮನೀಶ್ ನರ್ವಾಲ್, ಸಿಂಗರಾಜ್ ಗೆ ನಗದು ಬಹುಮಾನ ಘೋಷಿಸಿದ ಹರ್ಯಾಣ ಸರ್ಕಾರ

ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಚಿನ್ನ ಮತ್ತು ಬೆಳ್ಳಿ ಪದಕ ತಂದುಕೊಟ್ಟ ಶೂಟಿಂಗ್ ಜೋಡಿ ಮನೀಶ್ ನರ್ವಾಲ್, ಸಿಂಗರಾಜ್ ಗೆ ಹರ್ಯಾಣ ಸರ್ಕಾರ ನಗದು ಬಹುಮಾನ ಘೋಷಿಸಿದೆ.

ಚಂಡೀಘಡ: ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಚಿನ್ನ ಮತ್ತು ಬೆಳ್ಳಿ ಪದಕ ತಂದುಕೊಟ್ಟ ಶೂಟಿಂಗ್ ಜೋಡಿ ಮನೀಶ್ ನರ್ವಾಲ್, ಸಿಂಗರಾಜ್ ಗೆ ಹರ್ಯಾಣ ಸರ್ಕಾರ ನಗದು ಬಹುಮಾನ ಘೋಷಿಸಿದೆ.

ಚಿನ್ದ ಪದಕ ಗೆದ್ದ ಮನೀಶ್ ನರ್ವಾಲ್ ಗೆ 6 ಕೋಟಿ ರೂ ಮತ್ತು ಬೆಳ್ಳಿ ಪದಕ ಗೆದ್ದ ಸಿಂಗರಾಜ್ ಗೆ 4 ಕೋಟಿ ರೂ ನಗದು ಬಹುಮಾನ ನೀಡುವುದಾಗಿ ಹರ್ಯಾಣ ಸರ್ಕಾರ ಘೋಷಣೆ ಮಾಡಿದೆ.

ಇಂದು ನಡೆದ  ಶೂಟಿಂಗ್ ಪಿ4 50 ಮೀಟರ್ ಪಿಸ್ತೂಲ್ ಎಸ್ ಹೆಚ್ 1 ವಿಭಾಗದಲ್ಲಿ ಭಾರತದ ಮನೀಶ್ ನರ್ವಾಲ್ ಚಿನ್ನದ ಪದಕಕ್ಕೆ ಮುತ್ತಿಟ್ಟರೆ, ಸಿಂಗರಾಜ್ 2ನೇ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದರು. ಭಾರತದ ಮನೀಶ್ ನರ್ವಾಲ್ 218.2 ಅಂಕಗಳನ್ನು ಗಳಿಸಿ ಮೊದಲ ಸ್ಥಾನ ಪಡೆದಿದ್ದು, ಇದು ಭಾರತದ ಪರ ಗರಿಷ್ಠ ದಾಖಲೆ ಕೂಡ ಆಗಿದೆ. ಅದೇ ಪಂದ್ಯದಲ್ಲಿ ಭಾರತದ ಮತ್ತೋರ್ವ ಶೂಟರ್ ಅಧನ ಸಿಂಗರಾಜ್ ಅವರು 216.7 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಆ ಮೂಲಕ ಒಂದೇ ಪೈನಲ್ ಪಂದ್ಯದಲ್ಲಿ ಉಭಯ ಆಟಗಾರರು ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

ಈ ಪದಕಗಳ ಮೂಲಕ ಹಾಲಿ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಚಿನ್ನ 3, ಬೆಳ್ಳಿ 7 ಮತ್ತು 5 ಕಂಚಿನ ಪದಕಗಳು ಸೇರಿವೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT