ಸಾಂದರ್ಭಿಕ ಚಿತ್ರ 
ಕ್ರೀಡೆ

AIFF ನಿಷೇಧ ತೆಗೆದ FIFA: U-17 ಮಹಿಳಾ ವಿಶ್ವಕಪ್ 2022 ಭಾರತದಲ್ಲೇ ಆಯೋಜನೆ!

ಭಾರತೀಯ ಫುಟ್ಬಾಲ್ ಮೇಲಿನ ಕಾರ್ಮೋಡ ಅಂತ್ಯಗೊಂಡಿದೆ. ವಿಶ್ವ ಫುಟ್‌ಬಾಲ್‌ನ ಆಡಳಿತ ಮಂಡಳಿಯಾದ ಫಿಫಾ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್) ಮೇಲೆ ವಿಧಿಸಿದ್ದ ನಿಷೇಧವನ್ನು ಹಿಂತೆಗೆದುಕೊಂಡಿದೆ.

ಜ್ಯೂರಿಚ್: ಭಾರತೀಯ ಫುಟ್ಬಾಲ್ ಮೇಲಿನ ಕಾರ್ಮೋಡ ಅಂತ್ಯಗೊಂಡಿದೆ. ವಿಶ್ವ ಫುಟ್‌ಬಾಲ್‌ನ ಆಡಳಿತ ಮಂಡಳಿಯಾದ ಫಿಫಾ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್) ಮೇಲೆ ವಿಧಿಸಿದ್ದ ನಿಷೇಧವನ್ನು ಹಿಂತೆಗೆದುಕೊಂಡಿದೆ. ಇದರೊಂದಿಗೆ ಅಂಡರ್-17 ಮಹಿಳಾ ವಿಶ್ವಕಪ್ 2022ರ ಆತಿಥ್ಯವನ್ನು ಭಾರತಕ್ಕೆ ಮತ್ತೆ ನೀಡಲಾಗಿದೆ.

ಎಐಎಫ್‌ಎಫ್ ಕಾರ್ಯಕಾರಿ ಸಮಿತಿಯು ದೈನಂದಿನ ವ್ಯವಹಾರಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ನಂತರ ಫಿಫಾ ಈ ನಿರ್ಧಾರವನ್ನು ತೆಗೆದುಕೊಂಡಿದೆ. FIFA ಮತ್ತು ಏಷ್ಯನ್ ಫುಟ್‌ಬಾಲ್ ಫೆಡರೇಶನ್(AFC) AIFF ನಲ್ಲಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತದೆ ಮತ್ತು ಸಮಯಕ್ಕೆ ಸರಿಯಾಗಿ ಚುನಾವಣೆಗಳನ್ನು ನಡೆಸುವಲ್ಲಿ AIFF ಅನ್ನು ಬೆಂಬಲಿಸುತ್ತದೆ.

ಫಿಫಾ ತನ್ನ ಹೇಳಿಕೆಯಲ್ಲಿ, 'ಆಗಸ್ಟ್ 25ರಂದು ತಕ್ಷಣವೇ ಜಾರಿಗೆ ಬರುವಂತೆ ಎಐಎಫ್‌ಎಫ್ ಅಮಾನತುಗೊಳಿಸುವಿಕೆಯನ್ನು ತೆಗೆದುಹಾಕಲು ಕೌನ್ಸಿಲ್ ನಿರ್ಧರಿಸಿದೆ. ಈಗ FIFA U-17 ಮಹಿಳಾ ವಿಶ್ವಕಪ್ 11ರಿಂದ ಅಕ್ಟೋಬರ್ 30ರವರೆಗೆ ಭಾರತದಲ್ಲಿ ಹಳೆಯ ಯೋಜನೆಯ ಪ್ರಕಾರ ಆಯೋಜಿಸಬಹುದು. ಎಐಎಫ್‌ಎಫ್‌ನ ವ್ಯವಹಾರಗಳನ್ನು ನಡೆಸಲು ನೇಮಿಸಲಾಗಿದ್ದ ಆಡಳಿತಾಧಿಕಾರಿಗಳ ತ್ರಿಸದಸ್ಯ ಸಮಿತಿಯನ್ನು ವಜಾಗೊಳಿಸಿದ ನಂತರ ಮತ್ತು ಎಐಎಫ್‌ಎಫ್ ಆಡಳಿತವು ಸಂಘದ ದೈನಂದಿನ ವ್ಯವಹಾರಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವುದನ್ನು ದೃಢಪಡಿಸಿದ ನಂತರ ಈ ನಿರ್ಧಾರ ಹೊರಬಂದಿದೆ. 

ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (AIFF) ಅನ್ನು ಅಂತಾರಾಷ್ಟ್ರೀಯ ಫುಟ್ಬಾಲ್ ಸಮಿತಿ (ಫೀಫಾ) ನಿಷೇಧಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈ ಮಹತ್ವದ ಆದೇಶ ನೀಡಿತ್ತು. ಎಐಎಫ್‌ಎಫ್‌ನ ವ್ಯವಹಾರಗಳನ್ನು ನಿರ್ವಹಿಸಲು, ಶೀಘ್ರದಲ್ಲೇ ಚುನಾವಣೆಗಳನ್ನು ನಿರ್ವಹಿಸಲು ಸಿಒಎ ಆದೇಶವನ್ನು ಭಾರತ ಫುಟ್‌ಬಾಲ್ ಫೆಡರೇಶನ್ ಆಡಳಿತಾಧಿಕಾರಿಗಳ ಸಮಿತಿ ರದ್ದುಗೊಳಿಸುವ ಮೂಲಕ ಸುಪ್ರೀಂ ಕೋರ್ಟ್ ಕೊನೆಗೊಳಿಸಿದೆ.

ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್) ವ್ಯವಹಾರಗಳನ್ನು ನಿರ್ವಹಿಸಲು ಆಡಳಿತಾಧಿಕಾರಿಗಳ ಸಮಿತಿಯ (ಸಿಒಎ) ಆದೇಶವನ್ನು ಸುಪ್ರೀಂ ಕೋರ್ಟ್ ಸೋಮವಾರ ಕೊನೆಗೊಳಿಸಿದ್ದು, ಈ ಹಿಂದೆ ಆಗಸ್ಟ್ 28 ರಂದು ಎಐಎಫ್‌ಎಫ್‌ಗೆ ನಿಗದಿಯಾಗಿದ್ದ ಚುನಾವಣೆಯನ್ನು ಒಂದು ವಾರ ಮುಂದೂಡಿದೆ. ಬದಲಾದ ಚುನಾವಣಾ ಸಂಸ್ಥೆ ಮತ್ತು ನಾಮನಿರ್ದೇಶನಗಳ ಸಲ್ಲಿಕೆಗೆ ಹೊಸ ನಿಯಮಗಳನ್ನು ಅನುಸರಿಸಲು ಅವಕಾಶ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಗೆ ರೂ.10 ಕೋಟಿ: ಸುರಂಗ ರಸ್ತೆ ಯೋಜನೆಯಿಂದ 'ಸಸ್ಯೋದ್ಯಾನ'ದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ- ಡಿಕೆ ಶಿವಕುಮಾರ್

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

SCROLL FOR NEXT