ಮೆಸ್ಸಿ 
ಕ್ರೀಡೆ

ಫಿಫಾ ವಿಶ್ವಕಪ್: ಭಾನುವಾರದ ಫೈನಲ್‌ ನನ್ನ ಕೊನೆಯ ವಿಶ್ವಕಪ್‌ ಪಂದ್ಯ: ಅರ್ಜೆಂಟಿನಾ ಸೂಪರ್ ಸ್ಟಾರ್ ಮೆಸ್ಸಿ

ಇದೇ ಭಾನುವಾರ ನಡೆಯಲಿರುವ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವೇ ನನ್ನ ವೃತ್ತಿ ಜೀವನದ ಕೊನೆಯ ವಿಶ್ವಕಪ್‌ ಪಂದ್ಯ ಎಂದು ಅರ್ಜೆಂಟಿನಾ ಸೂಪರ್ ಸ್ಟಾರ್ ಲಿಯೋನಲ್ ಮೆಸ್ಸಿ ಘೋಷಣೆ ಮಾಡಿದ್ದಾರೆ.

ದೋಹಾ: ಇದೇ ಭಾನುವಾರ ನಡೆಯಲಿರುವ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವೇ ನನ್ನ ವೃತ್ತಿ ಜೀವನದ ಕೊನೆಯ ವಿಶ್ವಕಪ್‌ ಪಂದ್ಯ ಎಂದು ಅರ್ಜೆಂಟಿನಾ ಸೂಪರ್ ಸ್ಟಾರ್ ಲಿಯೋನಲ್ ಮೆಸ್ಸಿ ಘೋಷಣೆ ಮಾಡಿದ್ದಾರೆ.

ಮಂಗಳವಾರ ರಾತ್ರಿ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಕ್ರೊಯೇಷಿಯಾ ವಿರುದ್ಧ 3-0 ಅಂತರದ ಭರ್ಜರಿ ಜಯದ ಮೂಲಕ ಫೈನಲ್ ಪ್ರವೇಶಿಸಿರುವ ಅರ್ಜೆಂಟಿನಾ ತಂಡಕ್ಕೆ ಮೆಸ್ಸಿ ಬೆನ್ನೆಲುಬಾಗಿ ನಿಂತಿದ್ದು, ಇದೀಗ ಭಾನುವಾರ ನಡೆಯಲಿರುವ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವೇ ನನ್ನ ವೃತ್ತಿ ಜೀವನದ ಕೊನೆಯ ವಿಶ್ವಕಪ್‌ ಪಂದ್ಯ ಎಂದು ಮೆಸ್ಸಿ ಘೋಷಣೆ ಮಾಡಿದ್ದಾರೆ.

ತಾರ್‌ನಲ್ಲಿ ಭಾನುವಾರ ನಡೆಯಲಿರುವ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ತಮ್ಮ ನೇತೃತ್ವದ ಅರ್ಜೆಂಟಿನಾ ತಂಡ, ಫ್ರಾನ್ಸ್ ಅಥವಾ ಮೊರಕ್ಕೊವನ್ನು ಎದುರಿಸುವಾಗ ತಮ್ಮ ಕೊನೆಯ ವಿಶ್ವಕಪ್ ಪಂದ್ಯವನ್ನು ಆಡುವುದಾಗಿ ಖ್ಯಾತ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಖಚಿತಪಡಿಸಿದ್ದಾರೆ. ವಾರಾಂತ್ಯದಲ್ಲಿ ಅವರು 1986 ರ ನಂತರ ದೇಶಕ್ಕೆ ಮೊದಲ ವಿಶ್ವಕಪ್ ಪ್ರಶಸ್ತಿಯನ್ನು ತರಲು ಪ್ರಯತ್ನಿಸಲಿದ್ದಾರೆ.

ಸೆಮಿ ಫೈನಲ್ ಪಂದ್ಯದ ಬಳಿಕ ಅರ್ಜೆಂಟಿನಾದ ಮಾಧ್ಯಮ ಡಿಯಾರಿಯೊ ಡಿಪೋರ್ಟಿವೊ ಓಲೆನೊಂದಿಗೆ ಮಾತನಾಡಿದ ಮೆಸ್ಸಿ ‘ವಿಶ್ವಕಪ್‌ನಲ್ಲಿ ಕೊನೆಯ ಪಂದ್ಯವಾಗಿ ಫೈನಲ್‌ನಲ್ಲಿ ಆಡಲು ನನಗೆ ತುಂಬಾ ಸಂತೋಷವಾಗಿದೆ. ಅದು ನಿಜಕ್ಕೂ ಬಹಳ ಸಂತಸ ತಂದಿದೆ. ಫೈನಲ್‌ನಲ್ಲಿ ನನ್ನ ಕೊನೆಯ ಪಂದ್ಯ ಆಡುವ ಮೂಲಕ ನನ್ನ ವಿಶ್ವಕಪ್ ಪಯಣವನ್ನು ಮುಗಿಸುತ್ತಿರುವುದು ಅತ್ಯಂತ ಸಂತೋಷವಾಗಿದೆ. ಈ ಸಾಧನೆ ನನಗೆ ಖುಷಿ ತಂದಿದೆ.. ಈ ವಿಶ್ವಕಪ್‌ನಲ್ಲಿ ನಾನು ಕಳೆದ ಕ್ಷಣಗಳೆಲ್ಲವೂ ಭಾವುಕವಾಗಿದೆ, ಅರ್ಜೆಂಟೀನಾದಲ್ಲಿ ಅದನ್ನು ಎಷ್ಟು ಆನಂದಿಸಲಾಗಿದೆ ಎಂಬುದನ್ನು ನೋಡಿದ್ದೇನೆ’ಎಂದು ತಿಳಿಸಿದರು.

ಹಲವು ವರ್ಷಗಳ ಬಳಿಕ ಮುಂದಿನ ವಿಶ್ವಕಪ್ ನಡೆಯುತ್ತದೆ. ಅಲ್ಲಿ ಇಂತಹ ಸಾಧನೆ ಮಾಡಲಾಗುತ್ತದೆ ಎಂದು ನನಗೆ ಅನ್ನಿಸುತ್ತಿಲ್ಲ. ಈ ರೀತಿ ವಿದಾಯ ಹೇಳುವುದು ಅತ್ಯುತ್ತಮ ಎನಿಸುತ್ತದೆ. ದಾಖಲೆಗಳನ್ನು ಮಾಡುವುದು ಓಕೆ. ಆದರೆ, ಒಂದು ತಂಡವಾಗಿ ಸಾಧಿಸುವುದು ಅತ್ಯಂತ ಪ್ರಮುಖ. ತಂಡದ ಎಲ್ಲರಿಗೂ ಅದೊಂದು ಸುಂದರವಾದ ವಿಷಯ. ಸತತ ಪರಿಶ್ರಮದ ಬಳಿಕ ನಾವು ದೊಡ್ಡ ಸಾಧನೆಗೆ ಇನ್ನೊಂದು ಹೆಜ್ಜೆ ದೂರದಲ್ಲಿದ್ದೇವೆ. ಅದಕ್ಕಾಗಿ ಎಲ್ಲ ಪ್ರಯತ್ನ ಮಾಡುತ್ತೇವೆ’ಎಂದು ಮೆಸ್ಸಿ ಹೇಳಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT