ಮೊರೊಕ್ಕೊ ಮಣಿಸಿದ ಕ್ರೊಯೇಷಿಯಾ 
ಕ್ರೀಡೆ

ಫಿಫಾ ವಿಶ್ವಕಪ್‌: 2–1 ಅಂತರದಿಂದ ಮೊರೊಕ್ಕೊ ಮಣಿಸಿ 3ನೇ ಸ್ಥಾನಕ್ಕೇರಿದ ಕ್ರೊಯೇಷಿಯಾ

ಕತಾರ್ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ನಿನ್ನೆ ರಾತ್ರಿ ನಡೆದ 3ನೇ ಸ್ಥಾನದ ಪೈಪೋಟಿ ಪಂದ್ಯದಲ್ಲಿ 2–1 ಅಂತರದಿಂದ ಮೊರೊಕ್ಕೊ ತಂಡವನ್ನು ಮಣಿಸಿದ ಕ್ರೊಯೇಷಿಯಾ 3ನೇ ಸ್ಥಾನಕ್ಕೇರಿದೆ.

ದೋಹಾ: ಕತಾರ್ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ನಿನ್ನೆ ರಾತ್ರಿ ನಡೆದ 3ನೇ ಸ್ಥಾನದ ಪೈಪೋಟಿ ಪಂದ್ಯದಲ್ಲಿ 2–1 ಅಂತರದಿಂದ ಮೊರೊಕ್ಕೊ ತಂಡವನ್ನು ಮಣಿಸಿದ ಕ್ರೊಯೇಷಿಯಾ 3ನೇ ಸ್ಥಾನಕ್ಕೇರಿದೆ.

ಜೊಸ್ಕೊ ಗ್ವಾರ್ಡಿಯೊಲ್‌ ಮತ್ತು ಮಿಸ್ಲಾವ್‌ ಒರಿಸಿಚ್‌ ಗಳಿಸಿದ ಗೋಲುಗಳ ನೆರವಿನಿಂದ ಕ್ರೊಯೇಷಿಯಾ ತಂಡ, ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಮೂರನೇ ಸ್ಥಾನ ಗಳಿಸಿತು. ಖಲೀಫಾ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಕ್ರೊವೇಷ್ಯಾ 2–1 ಗೋಲುಗಳಿಂದ ಮೊರೊಕ್ಕೊ ತಂಡವನ್ನು ಮಣಿಸಿತು.

ಉಭಯ ತಂಡಗಳು ಸಾಕಷ್ಟು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದ್ದವು. ಮೊರೊಕ್ಕೊ ತಂಡದ ಪ್ರಮುಖ ಡಿಫೆಂಡರ್‌ಗಳಾದ ರೊಮೇನ್‌ ಸೈಸ್, ನಯೇಫ್‌ ಅಗುಯೆದ್‌ ಮತ್ತು ನಸೇರ್‌ ಮಜರೂಯಿ ಅವರು ಈ ಪಂದ್ಯದಲ್ಲಿ ಆಡಲಿಲ್ಲ. ಪಂದ್ಯದ ಏಳನೇ ನಿಮಿಷದಲ್ಲಿ ಗ್ವಾರ್ಡಿಯೊಲ್‌ ಅವರು ಕ್ರೊಯೇಷಿಯಾ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಇದಾದ ಎರಡು ನಿಮಿಷಗಳಲ್ಲೇ ಮೊರೊಕ್ಕೊ ತಿರುಗೇಟು ನೀಡಿತು. ಅಶ್ರಫ್‌ ದರಿ ಅವರು ಗೋಲು ಗಳಿಸಿ ಪಂದ್ಯವನ್ನು ಸಮಬಲಕ್ಕೆ ತಂದರು. ಆದರೆ, ಮೊದಲಾರ್ಧ ಕೊನೆಗೊಳ್ಳಲು ಕೆಲವೇ ನಿಮಿಷಗಳು ಇದ್ದಾಗ ಒರಿಸಿಚ್‌ (42ನೇ ನಿ.) ಅವರು ಕ್ರೊಯೇಷಿಯಾ ತಂಡಕ್ಕೆ2ನೇ ಗೋಲಿನ ಮೂಲಕ ಮತ್ತೆ ಮುನ್ನಡೆ ತಂದಿತ್ತರು.

ಎರಡನೇ ಅವಧಿಯಲ್ಲಿ ಮೊರೊಕ್ಕೊ ಸಮಬಲದ ಗೋಲಿಗಾಗಿ ಪ್ರಯತ್ನಿಸಿದರೂ ಯಶಸ್ಸು ಕಾಣಲಿಲ್ಲ. ಯೂಸೆಫ್‌ ಎನ್‌ ನೆಸ್ರಿ ಅವರಿಗೆ ಲಭಿಸಿದ ಅತ್ಯುತ್ತಮ ಅವಕಾಶವನ್ನು ಕ್ರೊಯೇಷಿಯಾ ಗೋಲ್‌ಕೀಪರ್‌ ಲಿವಕೊವಿಚ್‌ ತಡೆದರು. ಕ್ರೊಯೇಷಿಯಾ ತಂಡ 2–3 ಸಲ ಗೋಲು ಗಳಿಸುವ ಸನಿಹಕ್ಕೆ ಬಂದರೂ, ಅಲ್ಪ ಅಂತರದಲ್ಲಿ ಗುರಿ ತಪ್ಪಿತು. 

ಕ್ರೊಯೇಷಿಯಾ ತಂಡ ಫಿಫಾ ವಿಶ್ವಕಪ್‌ನಲ್ಲಿ ಮೂರನೇ ಸ್ಥಾನ ಗಳಿಸಿದ್ದು ಇದು ಎರಡನೇ ಬಾರಿ. ಸ್ವತಂತ್ರ ದೇಶವಾದ ಬಳಿಕ 1998 ರಲ್ಲಿ ಆಡಿದ ತನ್ನ ಚೊಚ್ಚಲ ವಿಶ್ವಕಪ್‌ನಲ್ಲೂ ಮೂರನೇ ಸ್ಥಾನ ಪಡೆದುಕೊಂಡಿತ್ತು. ಸೆಮಿಫೈನಲ್‌ ಪಂದ್ಯಗಳಲ್ಲಿ ಮೊರೊಕ್ಕೊ ತಂಡ ಫ್ರಾನ್ಸ್ ಎದುರು 0–2 ಗೋಲುಗಳ ಅಂತರದಿಂದ ಮತ್ತು ಕ್ರೊಯೇಷಿಯಾ ತಂಡ ಅರ್ಜೆಂಟೀನಾ ಎದುರು 0–3 ಗೋಲುಗಳ ಅಂತರದಿಂದ ಸೋಲು ಕಂಡಿದ್ದವು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

SCROLL FOR NEXT