ಸುಂದರ್ ಪಿಚೈ 
ಕ್ರೀಡೆ

#FIFAWorldCup 25 ವರ್ಷಗಳಲ್ಲೇ 'ಅತೀ ಹೆಚ್ಚು ಬಾರಿ ಗೂಗಲ್' ನಲ್ಲಿ ಸರ್ಚ್ ಆದ ಪದ: ಸುಂದರ್ ಪಿಚೈ ಮಾಹಿತಿ

FIFAWorldCup ಜಗತ್ತಿನಾದ್ಯಂತ ಜನ ಗೂಗಲ್ ನಲ್ಲಿ ಅತೀ ಹೆಚ್ಚು ಬಾರಿ ಶೋಧ ಮಾಡಿದ ಪದ ಎಂಬ ಮಾಹಿತಿ ಲಭ್ಯವಾಗಿದೆ.

ವಾಷಿಂಗ್ಟನ್: FIFAWorldCup ಜಗತ್ತಿನಾದ್ಯಂತ ಜನ ಗೂಗಲ್ ನಲ್ಲಿ ಅತೀ ಹೆಚ್ಚು ಬಾರಿ ಶೋಧ ಮಾಡಿದ ಪದ ಎಂಬ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಸ್ವತಃ ಗೂಗಲ್ ಮುಖ್ಯಸ್ಥ ಸುಂದರ್ ಪಿಚೈ ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಗೂಗಲ್​ನ 25 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಹೆಚ್ಚು ಜನ ಫಿಫಾ ವಿಶ್ವಕಪ್ ಕತಾರ್ 2022ರ ಫೈನಲ್ ಪಂದ್ಯದ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಜತೆಗೆ ಇದು ಗೂಗಲ್​ಗೆ ಹೆಚ್ಚು ಟ್ರಾಫಿಕ್​ನ್ನು ತಂದುಕೊಟ್ಟಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಗೂಗಲ್ ಸಿಇಒ ಸುಂದರ್ ಪಿಚೈ ಅವರು ಸೋಮವಾರ ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್​ನಲ್ಲಿ ಒಂದು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದು, ಗೂಗಲ್​ನ ಇತಿಹಾಸದಲ್ಲಿ ಇದೇ ಮೊದಲ ಬಾರಿ 100 ಕೋಟಿಗೂ ಹೆಚ್ಚು ಜನ ಫಿಫಾ ವಿಶ್ವಕಪ್ ಕತಾರ್ 2022ರ ಫೈನಲ್ ಪಂದ್ಯದ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಜತೆಗೆ ಇದು ಗೂಗಲ್​ಗೆ ಹೆಚ್ಚು ಟ್ರಾಫಿಕ್​ನ್ನು ತಂದುಕೊಟ್ಟಿದೆ ಎಂದು ಹೇಳಿದ್ದಾರೆ.

ಫ್ರಾನ್ಸ್ ವಿರುದ್ಧ ಅರ್ಜೆಂಟೀನಾ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಈ ಬಗ್ಗೆ  ಇದೇ ಮೊದಲ ಬಾರಿಗೆ 100 ಕೋಟಿಗೂ ಅಧಿಕ ಜನರು ಗೂಗಲ್​ನಲ್ಲಿ ಹುಡುಕಾಟ ನಡೆಸಿದ್ದಾರೆ. ಜೊತೆಗೆ ಇದು ಗೂಗಲ್ ಟ್ರಾಫಿಕ್​ನ್ನು ಕೂಡ ಹೆಚ್ಚು ಮಾಡಿದೆ. ಈ ಬಗ್ಗೆ ಗೂಗಲ್ ಸಿಇಒ ಸುಂದರ್ ಪಿಚೈ ತಮ್ಮ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ. ಭಾನುವಾರ ರಾತ್ರಿ ನಡೆದ ಫಿಫಾ ವಿಶ್ವಕಪ್ ಫೈನಲ್‌ನ್ನು ಗೂಗಲ್ ಹುಡುಕಾಟವು ಅತಿ ಹೆಚ್ಚು ಟ್ರಾಫಿಕ್​ನ್ನು ಪಡೆದುಕೊಂಡಿದೆ ಎಂದು ಪಿಚೈ ಬಹಿರಂಗಪಡಿಸಿದ್ದಾರೆ. 

ಇನ್ನು ಇಡೀ ಜಗತ್ತು ಕೇವಲ ಒಂದು ವಿಷಯದ ಬಗ್ಗೆ ಹೆಚ್ಚು ಹುಡುಕಾಟ ನಡೆಸಿದಂತೆ ತೋರುತ್ತಿದೆ ಎಂದು  US ನ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಯ ಸಂಶೋಧನಾ ವಿಜ್ಞಾನಿ ಲೆಕ್ಸ್ ಫ್ರಿಡ್ಮಾ ಹೇಳಿದ್ದಾರೆ. 

ಸುಂದರ್ ಪಿಚೈ ಅವರ ಟ್ವೀಟ್​ ಮಾಡಿದ ಕೆಲವೇ ಸಮಯದಲ್ಲಿ ಫುಟ್ಬಾಲ್ ಅಭಿಮಾನಿಗಳು ಅವರ ಟ್ವೀಟ್​ಗೆ ಪ್ರತಿಕ್ರಿಯಿಸಿದ್ದು, ಇದೊಂದು ಅದ್ಭುತ ವಿಷಯ, ಈ ಬಗ್ಗೆ ನಮಗೆ ಹೆಮ್ಮೆ ಇದೆ. ಫುಟ್ಬಾಲ್ ಎಲ್ಲರನ್ನೂ ಈ ಮೂಲಕ ಒಗ್ಗೂಡಿಸಿದೆ. ಒಂದು ಬಿಲಿಯನ್‌ಗಿಂತಲೂ ಹೆಚ್ಚು ಜನರು ಈ ಬಗ್ಗೆ ಪ್ರತಿಕ್ರಿಯೆ ಮಾಡಿದ್ದಾರೆ ಎಂದು ಹೇಳಲಾಗಿದೆ. ವಾಸ್ತವವಾಗಿ, ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ಗೂಗಲ್‌ನ “ಇಯರ್ ಇನ್ ಸರ್ಚ್ 2022” ವರದಿಯ ಪ್ರಕಾರ, ಫಿಫಾ ವಿಶ್ವಕಪ್ ಭಾರತದಲ್ಲಿ ಹೆಚ್ಚು ಹುಡುಕಲ್ಪಟ್ಟ ಮೂರನೇ ವಿಷಯವಾಗಿದೆ. ಮೆಸ್ಸಿ, Mbapppe ಮತ್ತು FIFA ವಿಶ್ವಕಪ್ ಫೈನಲ್ ನಿನ್ನೆ ಸಂಜೆ ಸಾಮಾಜಿಕ ಮಾಧ್ಯಮದಲ್ಲಿ ಟಾಪ್ ಟ್ರೆಂಡ್‌ ವಿಷಯಗಳಾಗಿದ್ದು, ಜನರು ಪಂದ್ಯವನ್ನು ಟ್ರ್ಯಾಕ್ ಮಾಡಿದ್ದು ಆಟಗಾರರು ಮತ್ತು ತಂಡಗಳ ಬಗ್ಗೆ ಮಾಹಿತಿಗಾಗಿ ಹುಡುಕಿದರು ಎಂದು ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT