ಭಗವಾನ್ ದೇವಿ 
ಕ್ರೀಡೆ

ಇವರು 94 ವರ್ಷದ ಅಥ್ಲೆಟ್ ಭಗವಾನ್ ದೇವಿ: ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ನಲ್ಲಿ ಚಿನ್ನದ ಪದಕ! 

ಇವರಿಗೆ ವಯಸ್ಸಿನ ಹಂಗಿಲ್ಲ, ಸಾಧನೆಗೆ ಇಳಿವಯಸ್ಸಿನ ಅಡ್ಡಿ ಎದುರಾಗಲಿಲ್ಲ. ಎಲ್ಲರೂ ಬಾಯಿಯ ಮೇಲೆ ಕೈಯಿಟ್ಟು ನೋಡುವಂತಹ ಇಡೀ ದೇಶ ಮೆಚ್ಚುವ ಸಾಧನೆ ಮಾಡಿತೋರಿಸಿದ್ದಾರೆ. ಅವರೇ 94 ವರ್ಷದ ಭಗವಾನ್ ದೇವಿಯವರು.

ನವದೆಹಲಿ: ಇವರಿಗೆ ವಯಸ್ಸಿನ ಹಂಗಿಲ್ಲ, ಸಾಧನೆಗೆ ಇಳಿವಯಸ್ಸಿನ ಅಡ್ಡಿ ಎದುರಾಗಲಿಲ್ಲ. ಎಲ್ಲರೂ ಬಾಯಿಯ ಮೇಲೆ ಕೈಯಿಟ್ಟು ನೋಡುವಂತಹ ಇಡೀ ದೇಶ ಮೆಚ್ಚುವ ಸಾಧನೆ ಮಾಡಿತೋರಿಸಿದ್ದಾರೆ. ಅವರೇ 94 ವರ್ಷದ ಭಗವಾನ್ ದೇವಿಯವರು.

ದಕ್ಷಿಣ ಫಿನ್ ಲ್ಯಾಂಡ್ ನ ಟಂಪರೆಯಲ್ಲಿ ನಡೆದ ವಿಶ್ವ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ನಲ್ಲಿ ಭಗವಾನ್ ದೇವಿಯವರು ಚಿನ್ನದ ಪದಕ ಗಳಿಸಿದ್ದಾರೆ. 100 ಮೀಟರ್ ಓಟ ಸ್ಪರ್ಧೆಯಲ್ಲಿ 24.74 ಸೆಕೆಂಡುಗಳಲ್ಲಿ ಓಡಿ ದಾಖಲೆ ನಿರ್ಮಿಸಿ ಚಿನ್ನದ ಪದಕ ಗಳಿಸಿದ್ದಾರೆ. ಇನ್ನು ಶಾಟ್ ಪುಟ್ ಪಂದ್ಯದಲ್ಲಿ ಸಹ ಕಂಚಿನ ಪದಕ ಗಳಿಸಿದ್ದಾರೆ. 

ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗಳು ಚೆನ್ನೈನಲ್ಲಿ ನಡೆದಿದ್ದವು. ಅಥ್ಲೀಟ್ ಭಗವಾನಿ ದೇಸ್ವಾಲ್ ಮೂರು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಭಗವಾನಿ ದೇವಿ ಅವರು 2022 ರ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪರವಾಗಿ ಸ್ಪರ್ಧಿಸುವ ಅರ್ಹತೆಗಳಲ್ಲಿ ತೇರ್ಗಡೆ ಹೊಂದಿ ದೇಶಕ್ಕಾಗಿ ಪ್ರಶಸ್ತಿಗಳನ್ನು ಗೆದ್ದು ತಂದಿದ್ದಾರೆ. 

ಇವರ ಸಾಧನೆಯನ್ನು ಇಡೀ ಭಾರತ ಕೊಂಡಾಡುತ್ತಿದೆ.ಬಾಲಿವುಡ್ ನಟಿ ಕಂಗನಾ ರಾನಾವತ್ ವಾರದ ಹಿಂದೆ ಈ ಅಜ್ಜಿಯ ಫೋಟೋ ಹಾಕಿ ಅವರ ಸಾಧನೆಯನ್ನು ಮುಕ್ತಕಂಠದಿಂದ ಕೊಂಡಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ಮೃತರ ಸಂಖ್ಯೆ 165ಕ್ಕೆ ಏರಿಕೆ; ನಾಪತ್ತೆಯಾದವರಲ್ಲಿ 133 ಮಂದಿ ಭಾರತೀಯರು, ಭಾರತದಿಂದ ನೆರವು

Iran ಸರ್ವೋಚ್ಚ ನಾಯಕ Mojtaba Khamenei ಸತ್ತಿಲ್ಲ, ಗಂಭೀರವಾಗಿ ಗಾಯಗೊಂಡಿದ್ದಾರೆ: ಹಳೇ Vidoe ಬಿಡುಗಡೆ ಬೆನ್ನಲ್ಲೇ ಅಸಲಿಯತ್ತು ಬಿಚ್ಚಿಟ್ಟ Donald Trump..!

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ