ಕ್ರೀಡೆ

ಕುರ್ಟಾನಾ ಗೇಮ್ಸ್: ಮತ್ತೆ ಚಿನ್ನ ಗೆದ್ದ ಒಲಂಪಿಕ್ಸ್ ಪದಕ ವೀರ ನೀರಜ್ ಚೋಪ್ರಾ!

Srinivasamurthy VN

ಕುರ್ಟಾನಾ: ಫಿನ್ ಲ್ಯಾಂಡ್ ನ ಕುರ್ಟಾನಾದಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಭಾರತದ ನೀರಜ್ ಚೋಪ್ರಾ ಮತ್ತೊಂದು ಸಾಧನೆ ಮಾಡಿದ್ದು, ಮತ್ತೆ ಚಿನ್ನ ಗೆದ್ದ ಇತಿಹಾಸ ಬರೆದಿದ್ದಾರೆ.

ಭಾರತದ ಜಾವೆಲಿನ್ ಪಟು ನೀರಜ್ ಚೋಪ್ರಾ ಶನಿವಾರ ಫಿನ್‌ಲ್ಯಾಂಡ್‌ನಲ್ಲಿ ನಡೆದ ಕುರ್ಟಾನೆ ಗೇಮ್ಸ್‌ನಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿ 86.69 ಮೀಟರ್ ಎಸೆದು ಚಿನ್ನದ ಪದಕ ಗೆದ್ದರು. ನೀರಜ್ ಚೋಪ್ರಾ ಟ್ರಿನಿಡಾಡ್ ಮತ್ತು ಟೊಬಾಗೋದ ಕೆಶೋರ್ನ್ ವಾಲ್ಕಾಟ್ ಮತ್ತು ಗ್ರೆನಡಾದ ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್‌ಗಿಂತ ಮೊದಲು ಗುರಿ ತಲುಪಿದರು. ಇತ್ತೀಚೆಗೆ ಹೊಸ ರಾಷ್ಟ್ರೀಯ ದಾಖಲೆಯನ್ನು ಸ್ಥಾಪಿಸಿದ ನೀರಜ್ ಚೋಪ್ರಾ ಅವರು ತಮ್ಮ 86.69 ಮೀ. ಎಸೆತದೊಂದಿಗೆ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದರು. 

ಟೋಕಿಯೊ ಒಲಿಂಪಿಕ್ಸ್‌ನ ನಂತರ ಇದು ನೀರಜ್ ಚೋಪ್ರಾರ ಎರಡನೇ ಸ್ಪರ್ಧೆಯಾಗಿದ್ದು, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚೋಪ್ರಾ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದ ಮೊದಲ ಭಾರತೀಯರಾದರು. ಇನ್ನು ಕೆಶೋರ್ನ್ ವಾಲ್ಕಾಟ್ 86.64 ಮೀ. ಎಸೆದು ಎರಡನೇ ಸ್ಥಾನ ಪಡೆದರೆ, ಆಂಡರ್ಸನ್ ಪೀಟರ್ಸ್ 84.75ರ ಅತ್ಯುತ್ತಮ ಪ್ರಯತ್ನದೊಂದಿಗೆ ಮೂರನೇ ಸ್ಥಾನ ಪಡೆದರು.

SCROLL FOR NEXT