ಕ್ರೀಡೆ

ಐಒಎ ಅಧ್ಯಕ್ಷರಾಗಿ ವೇಗದ ರಾಣಿ ಪಿಟಿ ಉಷಾ ಅವಿರೋಧ ಆಯ್ಕೆ ಖಚಿತ

Nagaraja AB

ನವದೆಹಲಿ: ಭಾರತೀಯ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಸ್ಥಾನಕ್ಕೆ ಡಿ.10 ರಂದು  ನಡೆಯುವ ಚುನಾವಣೆಗೆ ಮಾಜಿ ಓಟಗಾರ್ತಿ ಪಿಟಿ ಉಷಾ ಏಕೈಕ ಅಭ್ಯರ್ಥಿಯಾಗಿರುವುದರಿಂದ ಅವರು ಅವಿರೋಧವಾಗಿ ಆಯ್ಕೆಯಾಗುವುದು
ಬಹುತೇಕ ಖಚಿತವಾಗಿದೆ.

ಅನೇಕ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಹಾಗೂ 1984 ರ ಒಲಂಪಿಕ್ಸ್ 400 ಮೀ ಹರ್ಡಲ್ಸ್ ಫೈನಲ್‌ನಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿದ್ದ 58 ವರ್ಷದ ಪಿಟಿ ಉಷಾ, ಇಂದು ಇತರ 14 ಮಂದಿಯೊಂದಿಗೆ ಭಾರತೀಯ ಒಲಂಪಿಕ್ ಅಸೋಸಿಯೇಷನ್  ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೆ ಇಂದೇ ಕಡೆಯೇ ದಿನವಾಗಿತ್ತು.

ಐಒಎ ಚುನಾವಣಾಧಿಕಾರಿ ಉಮೇಶ್ ಸಿನ್ಹಾ ಶುಕ್ರವಾರ ಮತ್ತು ಶನಿವಾರ ಯಾವುದೇ ನಾಮಪತ್ರಗಳನ್ನು ಸ್ವೀಕರಿಸಲಿಲ್ಲ ಆದರೆ ಭಾನುವಾರ 24 ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ನಾಮಪತ್ರ ಸಲ್ಲಿಸಿದ್ದಾರೆ.  ಉಪಾಧ್ಯಕ್ಷ (ಮಹಿಳೆ) ಜಂಟಿ ಕಾರ್ಯದರ್ಶಿ (ಮಹಿಳೆ) ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ನಾಲ್ಕು ಕಾರ್ಯಕಾರಿ ಮಂಡಳಿ ಸದಸ್ಯ ಸ್ಥಾನದ ಚುನಾವಣೆಯಲ್ಲಿ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ.  ಒಬ್ಬ ಅಧ್ಯಕ್ಷರು, ಒಬ್ಬರು ಹಿರಿಯ ಉಪಾಧ್ಯಕ್ಷರು, ಇಬ್ಬರು ಉಪಾಧ್ಯಕ್ಷರು (ಒಬ್ಬ ಪುರುಷ ಮತ್ತು ಒಬ್ಬ ಮಹಿಳೆ), ಒಬ್ಬ ಖಜಾಂಚಿ, ಇಬ್ಬರು ಜಂಟಿ ಕಾರ್ಯದರ್ಶಿಗಳು (ಒಬ್ಬ ಪುರುಷ ಮತ್ತು ಒಬ್ಬ ಮಹಿಳೆ), ಆರು ಇತರ ಕಾರ್ಯಕಾರಿ ಮಂಡಳಿ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ.

SCROLL FOR NEXT