ಕ್ರೀಡೆ

ಕೋಸ್ಟರಿಕಾದಲ್ಲಿ ಫುಟ್ಬಾಲ್ ಆಟಗಾರನನ್ನು ಕೊಂದ ಮೊಸಳೆ; ಭೀಕರ ದೃಶ್ಯ!

Vishwanath S

ಕೋಸ್ಟರಿಕಾದಲ್ಲಿ ಅಮಾನುಷ ಘಟನೆ ನಡೆದಿದೆ. 29 ವರ್ಷದ ಫುಟ್ಬಾಲ್ ಆಟಗಾರ ಜೀಸಸ್ ಆಲ್ಬರ್ಟೊ ಲೋಪೆಜ್ ಒರ್ಟಿಜ್ ನದಿಯಲ್ಲಿ ಮೊಸಳೆಯೊಂದು ದಾಳಿ ಮಾಡಿದೆ ಎಂದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. 

ಕನಾಸ್ ನದಿಯು ಮೊಸಳೆಗಳಿಗೆ ಹೆಸರುವಾಸಿಯಾಗಿದೆ. ಇನ್ನು ಜೀಸಸ್ ಆಲ್ಬರ್ಟೊ ಮೀನುಗಾರಿಕೆ ಸೇತುವೆಯ ಬಳಿ ವ್ಯಾಯಾಮ ಮಾಡುತ್ತಿದ್ದಾಗ ಆತನ ಮೇಲೆ ಮೊಸಳೆ ದಾಳಿ ಮಾಡಿದ ಭಯಾನಕ ಕೃತ್ಯವನ್ನು ನೋಡಿದ ಪ್ರತ್ಯಕ್ಷದರ್ಶಿಗಳು ಸ್ಥಳದಿಂದ ಓಡಿಹೋಗಿದ್ದರು. ಕೋಸ್ಟರಿಕಾ ರಾಜಧಾನಿ ಸ್ಯಾನ್ ಜೋಸ್ ನಿಂದ 140 ಮೈಲಿ ದೂರದಲ್ಲಿ ಈ ಘಟನೆ ನಡೆದಿದೆ. 

ಒರ್ಟಿಜ್ ಡಿಪೋರ್ಟಿವೊರಿಯೊ ಕ್ಯಾನಸ್ ಅಮೆಚೂರ್ ಸಾಕರ್ ಕ್ಲಬ್‌ನ ಸದಸ್ಯರಾಗಿದ್ದಾರೆ. ಕೋಸ್ಟರಿಕಾದ ಅಸೆನ್ಸೊ ಲೀಗ್ ತಂಡದ ಸದಸ್ಯ. ಟೀಮ್ ಮ್ಯಾನೇಜ್‌ಮೆಂಟ್ ಕೂಡ ಒರ್ಟಿಜ್ ಸಾವನ್ನು ದೃಢಪಡಿಸಿದೆ. 

ದಾಳಿ ನಂತರ ಮೊಸಳೆ ಜೀಸಸ್ ಆಲ್ಬರ್ಟೋ ದೇಹವನ್ನು ಬಾಯಿಯಿಂದ ಕಚ್ಚಿಕೊಂಡು ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಎಳೆದೊಯ್ಯುತ್ತಿರುವ ದೃಶ್ಯಗಳು ಭೀಕರವಾಗಿದೆ. 

ಸ್ಥಳೀಯರು ಮೊಸಳೆಗೆ ಗುಂಡಿಕ್ಕಿ ಕೊಂದು ನಂತರ ಜೀಸಸ್ ಆಲ್ಪರ್ಟೊ ದೇಹವನ್ನು ಹೊರಕ್ಕೆ ತಂದಿದ್ದಾರೆ.

SCROLL FOR NEXT