ಕ್ರೀಡೆ

ಜಪಾನ್ ಓಪನ್: ಭಾರತದ ಲಕ್ಷ್ಯ ಸೇನ್ ಗೆ ಸೆಮಿ ಫೈನಲ್ ನಲ್ಲಿ ಆಘಾತ, ಜೋನಾಥನ್ ಕ್ರಿಸ್ಟಿ ವಿರುದ್ಧ ಸೋಲು

Srinivasamurthy VN

ಟೋಕಿಯೋ: ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಶನಿವಾರ ನಿರಾಸೆ ಅನುಭವಿಸಿದ್ದು, ಸೆಮಿ ಫೈನಲ್ ನಲ್ಲಿ ಭಾರತದ ಲಕ್ಷ್ಯ ಸೇನ್ ಅವರು ಜೋನಾಥನ್ ಕ್ರಿಸ್ಟಿ ವಿರುದ್ಧ ಸೋಲು ಅನುಭವಿಸಿದ್ದಾರೆ.

ಶನಿವಾರ ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆದ ಜಪಾನ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಸೆಮಿಫೈನಲ್‌ನಲ್ಲಿ ಭಾರತದ ಸ್ಟಾರ್ ಷಟ್ಲರ್ ಲಕ್ಷ್ಯ ಸೇನ್ ಮೂರು ಗೇಮ್‌ಗಳಲ್ಲಿ ವಿಶ್ವದ 9ನೇ ಶ್ರೇಯಾಂಕಿತ ಮತ್ತು ಏಷ್ಯನ್ ಗೇಮ್ಸ್ ಚಾಂಪಿಯನ್ ಜೊನಾಥನ್ ಕ್ರಿಸ್ಟಿ ವಿರುದ್ಧ ಸೋಲು ಕಂಡಿದ್ದಾರೆ. 68 ನಿಮಿಷಗಳ ಪಂದ್ಯದ ಆರಂಭದಿಂದಲೇ ಅಲ್ಮೋರಾದ 21 ವರ್ಷದ ಆಟಗಾರ ಕ್ರಿಸ್ಟಿ ಅವರು ಲಕ್ಷ್ಯಸೇನ್ ರನ್ನು ಒತ್ತಡದಲ್ಲಿರಿಸಿದ್ದರು.

ಪಂದ್ಯದುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಜೋನಾಥನ್ ಕ್ರಿಸ್ಟಿ 21-15, 13-21 ಮತ್ತು 21-16 ಅಂತರದಲ್ಲಿ ಲಕ್ಷ್ಯ ಸೇನ್ ಗೆಲುವು ಸಾಧಿಸಿದರು. ಈ ಹಿಂದೆ ಲಕ್ಷ್ಯ ಸೇನ್ ಮತ್ತು ಜೋನಾಥನ್ ಕ್ರಿಸ್ಟಿ ತಲಾ ಎರಡು ಬಾರಿ ಮುಖಾಮುಖಿಯಾಗಿದ್ದು, ಇಬ್ಬರೂ ತಲಾ ಒಂದೊಂದು ಪಂದ್ಯದಲ್ಲಿ ಜಯ ಗಳಿಸಿದ್ದಾರೆ.
 

SCROLL FOR NEXT