ದೀಪಿಕಾ ಪಳ್ಳಿಕಲ್‌​ ಮತ್ತು ಹರಿಂದರ್ ಪಾಲ್ ಸಿಂಗ್ 
ಕ್ರೀಡೆ

ಏಷ್ಯನ್ ಗೇಮ್ಸ್ 2023: ಸ್ಕ್ವಾಷ್‌ ಮಿಕ್ಸೆಡ್​ ಡಬಲ್ಸ್​ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ದೀಪಿಕಾ-ಹರಿಂದರ್!

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕದ ಬೇಟೆ ಗುರುವಾರ ಕೂಡ ಮುಂದುವರಿದಿದೆ. 12 ದಿನವಾದ ಇಂದು ಭಾರತ ಎರಡು ಚಿನ್ನದ ಪದಕ ಗೆದ್ದ ಸಾಧನೆ ಮಾಡಿದೆ.

ಹ್ಯಾಂಗ್‌ಝೌ: ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕದ ಬೇಟೆ ಗುರುವಾರ ಕೂಡ ಮುಂದುವರಿದಿದೆ. 12 ದಿನವಾದ ಇಂದು ಭಾರತ ಎರಡು ಚಿನ್ನದ ಪದಕ ಗೆದ್ದ ಸಾಧನೆ ಮಾಡಿದೆ.

ಕ್ವಾಷ್‌ ಮಿಕ್ಸೆಡ್​ ಡಬಲ್ಸ್​ನಲ್ಲಿ ದೀಪಿಕಾ ಪಳ್ಳಿಕಲ್‌​ ಮತ್ತು ಹರಿಂದರ್ ಪಾಲ್ ಸಿಂಗ್ ಜೋಡಿ ಮಲೇಷ್ಯಾ ಜೋಡಿಯನ್ನು 2-0(11-10, 11-10) ಅಂತರದಿಂದ ಮಣಿಸಿ ಚಿನ್ನದ ಪದಕ್ಕೆ ಮುತ್ತಿಟ್ಟಿದ್ದಾರೆ. ಈ ಮೂಲಕ ಭಾರತದ ಚಿನ್ನದ ಪದಕ ಸಂಖ್ಯೆ 20ಕ್ಕೆ ಏರಿದೆ.

ಭಾರತದ ಅನುಭವಿ ಜೋಡಿಯ ಮುಂದೆ ಮಲೇಷ್ಯಾದ ಐಫಾ ಬಿಂಟಿ ಅಜ್ಮಾನ್ ಮತ್ತು ಮೊಹಮ್ಮದ್ ಸಯಾಫಿಕ್ ಬಿನ್ ಮೊಹಮ್ಮದ್ ಜೋಡಿ ಸಂಪೂರ್ಣ ವಿಫಲಗೊಂಡಿತು. ದಿನದ ಆರಂಭದಲ್ಲಿ ನಡೆದ ಮಹಿಳೆಯರ ಕಾಂಪೌಂಡ್ ಆರ್ಚರಿ ಸ್ಪರ್ಧೆಯಲ್ಲಿ ಭಾರತದ ಜ್ಯೋತಿ ವೆನ್ನಮ್, ಅದಿತಿ ಸ್ವಾಮಿ, ಪರ್ನೀತ್ ಕೌರ್ ಅವನ್ನೊಳಗೊಂಡ ತಂಡ ಚಿನ್ನದ ಪದಕ ಜಯಿಸಿದ್ದು. ಸದ್ಯ ಒಂದೇ ದಿನ ಎರಡು ಚಿನ್ನ ಗೆದ್ದ ಭಾರತಕ್ಕೆ ಗುರುವಾರ ಅದೃಷ್ಟದ ದಿನವಾಗಿದೆ.

ಭಾರತದ ಮಹಿಳಾ ಕಾಂಪೌಡ್ ಆರ್ಚರಿ ತಂಡ ಚೈನೀಸ್ ತೈಪೆ ತಂಡವನ್ನು ಮಣಿಸಿದ್ದು, ಚಿನ್ನದ ಪದಕವನ್ನು ಗೆದ್ದುಕೊಂಡಿದೆ.

ಫೈನಲ್ ಸೆಣೆಸಾಟದಲ್ಲಿ ಭಾರತ ತಂಡ ಎದುರಾಳಿ ವಿರುದ್ಧ 230-229 ಅಂತರದಿಂದ ಗೆಲುವು ಸಾಧಿಸಿದ್ದು ಭಾರತದ ಆರ್ಚರ್‌ಗಳಾದ ಜ್ಯೋತಿ ವೆನ್ನಮ್, ಅದಿತಿ ಸ್ವಾಮಿ ಮತ್ತು ಪರ್ನೀತ್ ಕೌರ್ ಅವರನ್ನು ಒಳಗೊಂಡ ತಂಡ ಈ ಸಾಧನೆ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT