ಬೆಲ್ಜಿಯಂ ತಂಡದ ಆಟಗಾರರ ಸಂಭ್ರಮ 
ಕ್ರೀಡೆ

Paris Olympics 2024: ಹಾಕಿಯಲ್ಲಿ ಭಾರತಕ್ಕೆ ಮೊದಲ ಸೋಲು, ಗೆದ್ದು ಬೀಗಿದ ಬೆಲ್ಜಿಯಂ!

18ನೇ ನಿಮಿಷದಲ್ಲಿ ಭಾರತದ ಪರ ಅಭಿಷೇಕ್ ಗೋಲು ಹೊಡೆದು ಮುನ್ನಡೆಗೆ ತಂದರು. ಆದರೆ, 33ನೇ ನಿಮಿಷದಲ್ಲಿ ಬೆಲ್ಜಿಯಂ ಪರ ತಿಬ್ಯು ಸ್ಟಾಕ್‌ ಬ್ರೋಕ್ಸ್ ಮತ್ತು 44ನೇ ನಿಮಿಷದಲ್ಲಿ ಜಾನ್-ಜಾನ್ ಡೊಹ್ಮೆನ್ ಗೋಲು ಗಳಿಸುವುದರೊಂದಿಗೆ ಬೆಲ್ಜಿಯಂ ಗೆಲುವು ಸಾಧಿಸಿತು.

ಫ್ರಾನ್ಸ್: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತದ ಪುರುಷರ ಹಾಕಿ ತಂಡ ಮೊದಲು ಸೋಲು ಅನುಭವಿಸಿದೆ. ಗುರುವಾರ ನಡೆದ ಪೂಲ್- ಬಿ ಗುಂಪಿನ ಹಂತದ ಪಂದ್ಯದಲ್ಲಿ 1-2 ಗೋಲುಗಳ ಅಂತರದಿಂದ ಬೆಲ್ಜಿಯಂ ಎದುರು ಭಾರತ ಸೋಲಿಗೆ ಶರಣಾಯಿತು.

18ನೇ ನಿಮಿಷದಲ್ಲಿ ಭಾರತದ ಪರ ಅಭಿಷೇಕ್ ಗೋಲು ಹೊಡೆದು ಮುನ್ನಡೆಗೆ ತಂದರು. ಆದರೆ, 33ನೇ ನಿಮಿಷದಲ್ಲಿ ಬೆಲ್ಜಿಯಂ ಪರ ತಿಬ್ಯು ಸ್ಟಾಕ್‌ ಬ್ರೋಕ್ಸ್ ಮತ್ತು 44ನೇ ನಿಮಿಷದಲ್ಲಿ ಜಾನ್-ಜಾನ್ ಡೊಹ್ಮೆನ್ ಗೋಲು ಗಳಿಸುವುದರೊಂದಿಗೆ ಬೆಲ್ಜಿಯಂ ಗೆಲುವು ಸಾಧಿಸಿತು.

ಟೂರ್ನಿಯಲ್ಲಿ ಇಲ್ಲಿಯವರೆಗೂ ಬೆಲ್ಜಿಯಂ ಒಂದು ಪಂದ್ಯವನ್ನೂ ಸೋತಿಲ್ಲ. ಪೂಲ್- ಬಿ ಗುಂಪಿನ ಹಂತದಲ್ಲಿ ಭಾರತ ಮತ್ತು ಬೆಲ್ಜಿಯಂ ಈಗಾಗಲೇ ಕ್ವಾರ್ಟರ್ ಫೈನಲ್ ಗೆ ಅರ್ಹತೆ ಪಡೆದಿವೆ. ಭಾರತ ತನ್ನ ಕೊನೆಯ 3 ಪಂದ್ಯಗಳ ಪೈಕಿ 2ರಲ್ಲಿ ಗೆದ್ದಿದೆ. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಅನ್ನು 3-2 ಗೋಲುಗಳ ಅಂತರದಿಂದ ಸೋಲಿಸಿತ್ತು.

ಎರಡನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 2-0ರ ಅಂತರದಿಂದ ಜಯಿಸಿತ್ತು. ಅರ್ಜೆಂಟೀನಾ ವಿರುದ್ಧದ ಪಂದ್ಯ 1-1ರಿಂದ ಡ್ರಾನಲ್ಲಿ ಕೊನೆಗೊಂಡಿತ್ತು. ನಾಳೆ ತಮ್ಮ ಅಂತಿಮ ಪೂಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಪೈಪೋಟಿ ನಡೆಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್